ವಿದೇಶಿಯರಿಂದ ಪೌರತ್ವ ಮಸೂದೆಯ ದುರ್ಬಳಕೆ ಕುರಿತು ಎಚ್ಚರಿಕೆ ನೀಡಿದ್ದ ‘ರಾ’

Update: 2019-12-19 06:46 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.9: ಇಂದು ಲೋಕಸಭೆಯಲ್ಲಿ ಮಂಡನೆಯಾದ ಪೌರತ್ವ ತಿದ್ದುಪಡಿ ಮಸೂದೆಯ ಹಿಂದಿನ ಆವೃತ್ತಿಯ ಬಗ್ಗೆ ಗುಪ್ತಚರ ವಿಭಾಗ ರಾ ಜಂಟಿ ಸಂಸದೀಯ ಮಂಡಳಿಯ ಎದುರು ತನ್ನ ಆತಂಕಗಳನ್ನು ವ್ಯಕ್ತಪಡಿಸಿತ್ತು. ಈ ಆವೃತ್ತಿಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದರೂ ರಾಜ್ಯಸಭೆಯಲ್ಲಿ ತಡೆಹಿಡಿಯಲ್ಪಟ್ಟಿತ್ತು. ಮಸೂದೆಯ ಬಗ್ಗೆ ರಾ ಭದ್ರತಾ ಕಳವಳಗಳನ್ನು ಎತ್ತಿತ್ತು.

ಈ ವರ್ಷದ ಜನವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯ ವರದಿಯಂತೆ ಅದರ ಎದುರು ಹಾಜರಾಗಿದ್ದ ಹಿರಿಯ ರಾ ಅಧಿಕಾರಿ,ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ವಿದೇಶಿ ಏಜೆಂಟರು ಮಸೂದೆಯ ದುರ್ಬಳಕೆ ಮಾಡಿಕೊಳ್ಳಬಹುದು. ವಾಸ್ತವದಲ್ಲಿ ಭಾರತಲ್ಲಿ ನುಸುಳಲು ಈ ಮಸೂದೆಯು ಅವರಿಗೆ ಕಾನೂನುಬದ್ಧ ಮಾರ್ಗವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News