ಪೌರತ್ವ ಮಸೂದೆಗೆ ಜೆಡಿಯು ಬೆಂಬಲ: ಪ್ರಶಾಂತ್ ಕಿಶೋರ್ ಬೇಸರ

Update: 2019-12-19 07:52 GMT

ಹೊಸದಿಲ್ಲಿ, ಡಿ.10: ಲೋಕಸಭೆಯಲ್ಲಿ ಬಹುಮತದಿಂದ ಅಂಗೀಕಾರವಾಗಿರುವ ವಿವಾದಾತ್ಮಕ ಪೌರತ್ವ(ತಿದ್ದುಪಡಿ)ಮಸೂದೆಗೆ ತನ್ನ ಪಕ್ಷ ಬೆಂಬಲ ನೀಡಿರುವ ಕುರಿತು ಸಂಯುಕ್ತ ಜನತಾದಳ ಮುಖಂಡ ಪ್ರಶಾಂತ್ ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದರು.

 ಧರ್ಮದ ಆಧಾರದ ಮೇಲೆ ನಾಗರಿಕರ ಹಕ್ಕುಗಳ ಕುರಿತು ತಾರತಮ್ಯ ಮಾಡುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಜೆಡಿಯು ಬೆಂಬಲ ವ್ಯಕ್ತಪಡಿಸಿರುವುದನ್ನು ನೋಡಿ ನನಗೆ ಬೇಸರವಾಯಿತು. ಮೊದಲ ಪುಟದಲ್ಲಿ ಮೂರು ಬಾರಿ ಜಾತ್ಯತೀತ ಎಂಬ ಪದವನ್ನು ಹೊಂದಿರುವ ಪಕ್ಷದ ಸಂವಿಧಾನ ಹಾಗೂ ಗಾಂಧಿವಾದಿ ಆದರ್ಶಗಳಿಂದ ಮಾರ್ಗದರ್ಶಿಸಲ್ಪಟ್ಟ ನಾಯಕತ್ವಕ್ಕೆ ಇದು ಅಸಂಗತವಾಗಿದೆ ಎಂದು ಕಿಶೋರ್ ಟ್ವೀಟ್ ಮಾಡಿದ್ದಾರೆ.

 ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸಹಿತ ಹಲವು ಪಕ್ಷಗಳು ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಿರುವ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದವು. ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗಿರುವ ಅಲ್ಪ ಸಂಖ್ಯಾತರಿಗೆ ಭಾರತೀಯ ಪೌರತ್ವದ ಭರವಸೆ ನೀಡುತ್ತಿರುವ ಕಾರಣ ಪೌರತ್ವ ಮಸೂದೆಗೆ ನಮ್ಮ ಪಕ್ಷ ಬೆಂಬಲ ಸೂಚಿಸುತ್ತದೆ ಎಂದು ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News