ಡೋಪಿಂಗ್ ಟೆಸ್ಟ್‌ನಲ್ಲಿ ಇಬ್ಬರು ಭಾರತೀಯರು ಫೇಲ್ !

Update: 2019-12-11 03:50 GMT

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಏಳು ತಿಂಗಳು ಬಾಕಿ ಉಳಿದಿದ್ದು, ಇಬ್ಬರು ಭಾರತೀಯ ಒಲಿಂಪಿಕ್ಸ್ ಆಕಾಂಕ್ಷಿಗಳು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದರಿಂದಾಗಿ ಶೂಟರ್ ರವಿ ಕುಮಾರ್ ಮತ್ತು ಬಾಕ್ಸರ್ ಸುಮಿತ್ ಸಂಗ್ವಾನ್ ಅವರ ಒಲಿಂಪಿಕ್ಸ್ ಕನಸು ನುಚ್ಚುನೂರಾಗಿದೆ.

ಈ ಇಬ್ಬರೂ ನಿಷೇಧಿತ ಉದ್ದೀಪನಾ ಔಷಧ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ನಾಡಾ (ನ್ಯಾಷನಲ್ ಆ್ಯಂಟಿ ಡೋಪಿಂಗ್ ಅಥಾರಿಟಿ) ಪ್ರಕಟಿಸಿದೆ.

ಈ ಎರಡೂ ಕ್ರೀಡೆಗಳಲ್ಲಿ ಡೋಪ್ ಉಲ್ಲಂಘನೆ ತೀರಾ ವಿರಳವಾಗಿರುವುರಿಂದ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತರಾದ ಈ ಇಬ್ಬರ ಹೆಸರನ್ನು ನಾಡಾ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಒಲಿಂಪಿಯನ್ ಸುಮಿತ್ ಸಂಗ್ವಾನ್ (91ಕೆಜಿ) ಅವರನ್ನು ಅಸೆಟಝೊಲಮೈಡ್ ಸೇವನೆ ಪರೀಕ್ಷೆಗೆ ಒಳಪಡಿಸಿದಾಗ ಧನಾತ್ಮಕ ಫಲಿತಾಂಶ ಬಂದಿದೆ. ಸೆಂಗ್ವಾನ್ (26) ಅವರು 2017ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಗ್ವಾಡಲಜಾರ ವಿಶ್ವಕಪ್ ಮತ್ತು ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ವೈಯಕ್ತಿಕ ಕಂಚಿನ ಪದಕ ಗೆದ್ದಿದ್ದ ರವಿಕುಮಾರ್ (29) ಅವರಲ್ಲಿ ಪ್ರೊಪ್ರೊನಲಾಲ್ ಮಾದರಿಯ ನಿಷೇಧಿತ ಔಷಧ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News