ಅಮಿತ್ ಶಾ ಇತಿಹಾಸ ತರಗತಿ ವೇಳೆ ಗಮನವಿಟ್ಟು ಕೇಳಿಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ?

Update: 2019-12-11 06:12 GMT

ಮುಂಬೈ: ದೇಶ ವಿಭಜನೆ 1947ರಲ್ಲಿ ನಡೆದಾಗ ಕಾಂಗ್ರೆಸ್ ಪಕ್ಷ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಿತ್ತು ಎಂದು ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವ ವೇಳೆ ಗೃಹ ಸಚಿವ ಅಮಿತ್ ಶಾ ಹೇಳಿದ್ದಕ್ಕೆ ಆಕ್ಷೇಪಿಸಿದ ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್, "ಅಮಿತ್ ಶಾ ಅವರು ಇತಿಹಾಸ ತರಗತಿಗಳ ಸಂದರ್ಭ ಸರಿಯಾಗಿ ಗಮನವಿಟ್ಟು ಕೇಳಿಲ್ಲ ಎಂದು ಅನಿಸುತ್ತದೆ. ಎರಡು ದೇಶ ಸಿದ್ಧಾಂತವನ್ನು ಹಿಂದು ಮಹಾಸಭಾ ಬೆಂಬಲಿಸಿತ್ತು,'' ಎಂದು 'ನೆಟ್‍ವರ್ಕ್ 18' ಮುಂಬೈಯಲ್ಲಿ ನಡೆಸಿದ ಲೋಕಮತ ಕಾಂಕ್ಲೇವ್‍ನಲ್ಲಿ ಮಾತನಾಡುತ್ತಾ ಹೇಳಿದರು.

"ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಮೇಲಿನ ದಾಳಿಯಾಗಿದೆ. ನಾವು ಎಲ್ಲರಿಗಾಗಿ ಮುಕ್ತ ಭಾರತ ಸೃಷ್ಟಿಸಬೇಕು, ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಸಾಧ್ಯವಿಲ್ಲ,'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News