ಕ್ವೈಶ್ ಪನ್ವಾರ್ ರಾಜ್ಯ ಮಟ್ಟದ ‘ಬೆಸ್ಟ್ ಫೈಟರ್’ ಪ್ರಶಸ್ತಿಗೆ ಆಯ್ಕೆ

Update: 2019-12-11 18:37 GMT

ಬೆಂಗಳೂರು, ಡಿ. 11: ನಗರದ ಬಿಟಿಎಂ ಲೇಔಟ್‌ನ ಏಕ್ಯ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಕ್ವೈಶ್ ಪನ್ವಾರ್ ಅವರು ರಾಜ್ಯ ಮಟ್ಟದ 19ನೆ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ವಿಭಾಗದಲ್ಲಿ ‘ಬೆಸ್ಟ್ ಫೈಟರ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿ ಕ್ವೈಶ್ ಪನ್ವಾರ್ ಅವರು ಸತತ ಮೂರನೆ ಬಾರಿ ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಶಾಲೆ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಏಕ್ಯ ಸ್ಕೂಲ್‌ನ ಮುಖ್ಯಸ್ಥರು ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಅಭಿನಂದನೆ ಸಲ್ಲಿಸಿದ್ದು, ಇನ್ನೂ ಉತ್ತಮ ಸಾಧನೆ ಮಾಡಲಿ ಎಂದು ಪ್ರಕಟಣೆಯಲ್ಲಿ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News