ಅಸ್ಸಾಂನ ನನ್ನ ಸಹೋದರ ಹಾಗೂ ಸಹೋದರಿಯರು ಚಿಂತಿಸುವ ಅಗತ್ಯವಿಲ್ಲ: ಪ್ರಧಾನಿ ಭರವಸೆ

Update: 2019-12-19 05:46 GMT

 ಹೊಸದಿಲ್ಲಿ, ಡಿ.12: ಅಸ್ಸಾಂ ಜನತೆ ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅಸ್ಸಾಂ ರಾಜ್ಯದ ಸಂಸ್ಕೃತಿ, ಜನರ ಹಕ್ಕು ಕಾಪಾಡಲು ಸರಕಾರ ಬದ್ಧವಾಗಿದೆ. ಅಸ್ಸಾಂ ಜನರ ಭೂಮಿಯ ಹಕ್ಕು ಸುರಕ್ಷಿತವಾಗಿದ್ದು, ನಿಮ್ಮ ಅಧಿಕಾರ, ಹಕ್ಕನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಅಸ್ಸಾಂನಲ್ಲಿ ಪೌರತ್ವ ಮಸೂದೆ ವಿರೋಧಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಜನರ ಆಕ್ರೋಶವನ್ನು ತಣಿಸಲು ಪ್ರಧಾನಿ ಪ್ರಯತ್ನಿಸುತ್ತಿದ್ದಾರೆ. ಇಂಗ್ಲೀಷ್ ಹಾಗೂ ಅಸ್ಸಾಂ ಭಾಷೆಗಳಲ್ಲಿ ಬುಧವಾರ ಸರಣಿ ಟ್ವೀಟ್ ಮಾಡಿದ್ದಾರೆ.

‘‘ಪೌರತ್ವ ಮಸೂದೆ ಅಂಗೀಕಾರವಾಗಿರುವ ಕುರಿತು ಅಸ್ಸಾಂನಲ್ಲಿರುವ ನನ್ನ ಸಹೋದರ ಹಾಗೂ ಸಹೋದರಿಯರು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಹಕ್ಕನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಅಪೂರ್ವ ಗುರುತು ಹಾಗೂ ಸುಂದರ ಸಂಸ್ಕೃತಿ. ಇದು ಮುಂದುವರಿಯುತ್ತದೆ ಹಾಗೂ ಬೆಳೆಯುತ್ತದೆ'' ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News