ಪಾತ್ರೆಯೊಳಗೆ ಸಿಲುಕಿಕೊಂಡ ಬಾಲಕನ ತಲೆ!

Update: 2019-12-12 06:46 GMT

 ಜಲೋರ್, ಡಿ.12: ರಾಜಸ್ಥಾನದಲ್ಲಿ ಮೂರು ವರ್ಷದ ಬಾಲಕನ ತಲೆ ಸ್ಟೀಲ್ ಪಾತ್ರೆದೊಳಗೆ ಸಿಲುಕಿಹಾಕಿಕೊಂಡ ಆಘಾತಕಾರಿ ಘಟನೆ ನಡೆದಿದ್ದು, ಎಚ್ಚೆತ್ತುಕೊಂಡ ಗ್ರಾಮಸ್ಥರು ಪಾತ್ರೆಯನ್ನು ಒಡೆದು ಹಾಕಿ ಬಾಲಕನನ್ನು ಅಪಾಯದಿಂದ ಪಾರು ಮಾಡಿದ್ದಾರೆ.

‘‘ಪಾತ್ರೆಯೊಳಗಿಂದ ಬಾಲಕನ ತಲೆಯನ್ನು ಹೊರ ತೆಗೆಯಲು ಸುಮಾರು ಅರ್ಧಗಂಟೆ ಸಮಯ ತಗಲಿತ್ತು. ಇದು ನಮಗೆ ತುಂಬಾ ಕಷ್ಟಕರ ಸವಾಲಾಗಿತ್ತು. ಬಾಲಕ ಇದೀಗ ಸುರಕ್ಷಿತವಾಗಿದ್ದಾನೆ’’ಎಂದು ಬಾಲಕನನ್ನು ರಕ್ಷಿಸಿದ ಗ್ರಾಮಸ್ಥನೊಬ್ಬ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News