ನೈಜರ್ ಶಿಬಿರದ ಮೇಲೆ ದಾಳಿ; 71 ಸೈನಿಕರ ಸಾವು

Update: 2019-12-12 15:26 GMT

ನಿಯಾಮಿ (ನೈಜರ್), ಡಿ. 12: ಮಾಲಿ ದೇಶದೊಂದಿಗಿನ ಗಡಿ ಸಮೀಪದಲ್ಲಿರುವ ನೈಜರ್ ದೇಶದ ಸೇನಾ ಶಿಬಿರವೊಂದರ ಮೇಲೆ ನೂರಾರು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 71 ನೈಜರ್ ಸೈನಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.

ಪಶ್ಚಿಮ ತಿಲಬೆರಿ ವಲಯದ ಇನೇಟ್ಸ್‌ನಲ್ಲಿ ಮಂಗಳವಾರ ನಡೆದ ದಾಳಿಯು ನೈಜರ್ ಸೇನೆಯ ಮೇಲೆ ಈವರೆಗೆ ನಡೆದ ಭೀಕರ ದಾಳಿಯಾಗಿದೆ.

‘‘ಹಲವು ನೂರರಷ್ಟಿದ್ದ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಭಯೋತ್ಪಾದಕರನ್ನೂ ಕೊಲ್ಲಲಾಗಿದೆ’’ ಎಂದು ರಾಷ್ಟ್ರೀಯ ಟೆಲಿವಿಶನ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ರಕ್ಷಣಾ ಸಚಿವಾಲಯ ಹೇಳಿದೆ.

ದಾಳಿಯು ಮೂರು ಗಂಟೆಗಳ ಕಾಲ ನಡೆಯಿತು.

‘‘ಭಯೋತ್ಪಾದಕರು ಶಿಬಿರದ ಮೇಲೆ ಶೆಲ್ ಮತ್ತು ಮೋರ್ಟರ್ ದಾಳಿಗಳನ್ನು ನಡೆಸಿದರು. ಶಸ್ತ್ರಾಸ್ತ್ರಗಳು ಮತ್ತು ಇಂಧನ ಸ್ಫೋಟದಿಂದಾಗಿ ಭಾರೀ ಸಾವು ನೋವು ಸಂಭವಿಸಿದೆ’’ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News