ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಜನವರಿ 5ರವರೆಗೆ ರಜೆ ಘೋಷಿಸಿದ ಜಾಮಿಯಾ ವಿವಿ

Update: 2019-12-19 06:37 GMT

ಹೊಸದಿಲ್ಲಿ,ಡಿ.14: ತಿದ್ದುಪಡಿಗೊಂಡ ಪೌರತ್ವ ಕಾಯ್ದೆಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ವಿವಿಯಲ್ಲಿ ಉದ್ವಿಗ್ನ ಸ್ಥಿತಿಯಿರುವ ಹಿನ್ನೆಲೆಯಲ್ಲಿ ಜ.5ರವರೆಗೆ ರಜೆಯನ್ನು ಘೋಷಿಸಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿದೆ.

ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದ್ದು,ನೂತನ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು. ಡಿ.16ರಿಂದ ಜ.5ರವರೆಗೆ ರಜೆಯನ್ನು ಘೋಷಿಸಲಾಗಿದ್ದು,2020,ಜ.6ರಂದು ವಿವಿಯು ಪುನರಾರಂಭಗೊಳ್ಳಲಿದೆ ಎಂದು ವಿವಿಯ ಹಿರಿಯ ಅಧಿಕಾರಿಯೋರ್ವರು ಶನಿವಾರ ತಿಳಿಸಿದರು.

ಕಾಯ್ದೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಶುಕ್ರವಾರ ಸಂಸತ್ತಿಗೆ ಪ್ರತಿಭಟನಾ ಜಾಥಾ ನಡೆಸಲು ಪ್ರಯತ್ನಿಸಿದಾಗ ಅವರ ಮತ್ತು ಪೊಲೀಸರ ನಡುವೆ ಘರ್ಷಣೆಗಳುಂಟಾಗಿ ವಿವಿಯ ಆವರಣವು ಅಕ್ಷರಶಃ ರಣರಂಗವಾಗಿ ಪರಿವರ್ತನೆ ಗೊಂಡಿತ್ತು.

ಶನಿವಾರ ವಿವಿ ಬಂದ್‌ಗೆ ಕರೆ ನೀಡಿದ್ದ ವಿದ್ಯಾರ್ಥಿಗಳು ತಿದ್ದುಪಡಿಗೊಂಡ ಪೌರತ್ವ ಕಾಯ್ದೆ ಮತ್ತು ಶುಕ್ರವಾರ ತಮ್ಮ ಮೇಲೆ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಪರೀಕ್ಷೆಯನ್ನು ಬಹಿಷ್ಕರಿಸಲು ಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ನಡೆಯಲಿದ್ದ ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ವಿವಿಯು ಬೆಳಿಗ್ಗೆಯೇ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News