ಬೆಂಗಳೂರು: ವ್ಯಕ್ತಿಗೆ ಚೂರಿ ಇರಿತ

Update: 2019-12-22 17:10 GMT

ಬೆಂಗಳೂರು, ಡಿ.22: ವ್ಯಕ್ತಿಯೊಬ್ಬನಿಗೆ ದುಷ್ಕರ್ಮಿಗಳು ಚಾಕು ಇರಿದು ಗಾಯಗೊಳಿಸಿರುವ ಘಟನೆ ಇಲ್ಲಿನ ಜೆಸಿ ನಗರ ರಸ್ತೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ವರುಣ್ ಎಂಬಾತ ಗಾಯಗೊಂಡಿದ್ದು, ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ರವಿವಾರ ಇಲ್ಲಿನ ಪುರಭವನ ಮುಂಭಾಗ ಸಿಎಎ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ವರುಣ್ ಭಾಗವಹಿಸಿದ್ದ ಎನ್ನಲಾಗಿದ್ದು, ಮಧ್ಯಾಹ್ನ ಮನೆಗೆ ಹೋಗುತ್ತಿದ್ದ ವೇಳೆ ಜೆಸಿ ನಗರ ರಸ್ತೆಯಲ್ಲಿ ದುಷ್ಕರ್ಮಿಗಳು ಚಾಕು ಇರಿದು ಗಾಯಗೊಳಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News