ಉಯಿಘರ್ ಮುಸ್ಲಿಮರನ್ನು ಬೆಂಬಲಿಸಿ ಹಾಂಕಾಂಗ್‌ನಲ್ಲಿ ರ್ಯಾಲಿ

Update: 2019-12-22 18:33 GMT

ಹಾಂಕಾಂಗ್,ಡಿ.22: ಚೀನಾ ಆಡಳಿತದಿಂದ ದಮನಕ್ಕೊಳಗಾಗಿರುವ ಉಯಿಘರ್ ಮುಸ್ಲಿಮರ ಜೊತೆ ಏಕತೆಯನ್ನು ವ್ಯಕ್ತಪಡಿಸಿ ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರು ರವಿವಾರ ಬೃಹತ್ ರ್ಯಾಲಿ ನಡೆಸಿದರು. ಉಯಿಘರ್ ಮುಸ್ಲಿಮ ರಂತೆಯೇ ಹಾಂಕಾಂಗ್ ಜನತೆ ಕೂಡಾ ಚೀನಾ ಆಡಳಿತದಿಂದ ದೌರ್ಜನ್ಯ ಕ್ಕೊಳಗಾಗಿದ್ದಾರೆಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

 ರ್ಯಾಲಿ ನಡೆದ ಸ್ಥಳದ ಸಮೀಪದಲ್ಲಿನ ಸರಕಾರಿ ಕಟ್ಟಡದಿಂದ ಕೆಲವು ಪ್ರತಿಭಟನಕಾರರು ಚೀನಾದ ಧ್ವಜವನ್ನು ಕಿತ್ತುಹಾಕಿದಾಗ ಪೊಲೀಸರು ಕಾರ್ಯಾಚರಣೆ ನಡೆಸಿ, ಅವರನ್ನು ಚದುರಿಸಿದರು.

 ಹಾಂಕಾಂಗ್‌ನ ಹಾರ್ಬರ್‌ಫ್ರಂಟ್ ಪ್ರದೇಶದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರೆಂದು ಅಂದಾಜಿಸಲಾಗಿದೆ. ಬೀಜಿಂಗ್ ಆಡಳಿತವು ಉಯಿಘರ್ ಪ್ರಾಂತದಲ್ಲಿ ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯವು ಮುಂಬರುವ ದಿನಗಳಲ್ಲಿ ಹಾಂಕಾಂಗ್‌ನಲ್ಲಿಯೂ ಪುನರಾವರ್ತನೆಗೊಳ್ಳಬಹುದೆಂದು ರ್ಯಾಲಿಯಲ್ಲಿ ಭಾಷಣಕಾರರು ಎಚ್ಚರಿಕೆ ನೀಡಿದರು.

ಹಾಂಕಾಂಗ್‌ನಲ್ಲಿ ನಡೆಯುವ ಪ್ರಜಾಪ್ರಭುತ್ವ ಪರ ರ್ಯಾಲಿಗಳಲ್ಲಿ ಉಯಿಘರ್ ಹೋರಾಟಗಾರರ ಪರ ಘೋಷಣೆಗಳು ಹಾಗೂ ಧ್ವಜಗಳ ಪ್ರದರ್ಶನವು ಸಾಮಾನ್ಯವಾಗಿದೆ. ಆದರೆ ರವಿವಾರದಂದು ನಡೆದ ರ್ಯಾಲಿಯನ್ನು ನಿರ್ದಿಷ್ಟವಾಗಿ ಉಯಿಘುರ್‌ಗಳಿಗೆ ಬೆಂಬಲವನ್ನು ವ್ಯಕ್ತಪಡಿಸುವುದಕ್ಕಾಗಿಯೇ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News