ಸಿಎಎ ವಿರುದ್ಧ ಪ್ರತಿಭಟನೆ: ಸಾವುಗಳ ಕುರಿತು ಸಮಗ್ರ ತನಿಖೆಗೆ ಮಾಯಾವತಿ ಕರೆ

Update: 2019-12-25 16:39 GMT

ಹೊಸದಿಲ್ಲಿ,ಡಿ.25: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಸಂದರ್ಭ ಸಂಭವಿಸಿರುವ ಸಾವುಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಬುಧವಾರ ಉತ್ತರ ಪ್ರದೇಶದಲ್ಲಿಯ ಬಿಜೆಪಿ ಸರಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಳೆದ ವಾರ ನಡೆದಿದ್ದ ಪ್ರತಿಭಟನೆಗಳಲ್ಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ.

‘ಸಿಎಎ/ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳಲ್ಲಿ ಗರಿಷ್ಠ ಸಾವುಗಳು ಉತ್ತರ ಪ್ರದೇಶದಲ್ಲಿ ಸಂಭವಿಸಿವೆ. ರಾಜ್ಯ ಸರಕಾರವು ಈ ಸಾವುಗಳ ಕುರಿತು ಸರಿಯಾದ ತನಿಖೆ ನಡೆಸಬೇಕು ಮತ್ತು ಮೃತ ಅಮಾಯಕರ ಕುಟುಂಬಗಳಿಗೆ ನೆರವಾಗಲು ಮುಂದೆ ಬರಬೇಕು ’ಎಂದು ಮಾಯಾವತಿ ಟ್ವೀಟಿಸಿದ್ದಾರೆ.

 ಸಿಎಎ ಮತ್ತು ಎನ್‌ಸಿಆರ್ ಕುರಿತು ಮುಸ್ಲಿಮರಲ್ಲಿರುವ ಕಳವಳಗಳನ್ನು ನಿವಾರಿಸುವಂತೆ ಮಾಯಾವತಿ ಮಂಗಳವಾರ ಕೇಂದ್ರಕ್ಕೆ ಕಿವಿಮಾತು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News