ಈ ವರ್ಷ ಅಮೆರಿಕದಲ್ಲಿ ಬಂದೂಕಿನಿಂದ 38,730 ಮಂದಿ ಸಾವು

Update: 2019-12-27 19:04 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಡಿ. 27: 2019ರಲ್ಲಿ ಅಮೆರಿಕದಲ್ಲಿ ಬಂದೂಕಿನ ಗುಂಡುಗಳಿಂದಾಗಿ 38,730 ಮಂದಿ ಸತ್ತಿದ್ದಾರೆ ಎಂದು ಗನ್ ವಾಯ್‌ಲೆನ್ಸ್ ಆರ್ಕೈವ್ ಎಂಬ ಸಂಘಟನೆ ತಿಳಿಸಿದೆ.

ಈ ಪೈಕಿ 14,970 ಮಂದಿ ನರಹತ್ಯೆ, ಕೊಲೆ ಮತ್ತು ಆಕಸ್ಮಿಕ ಗುಂಡು ಹಾರಾಟದ ಬಲಿಪಶುಗಳು ಎಂದು ಸಂಘಟನೆಯು ಗುರುವಾರ ಸಲ್ಲಿಸಿದ ತನ್ನ ವರದಿಯಲ್ಲಿ ಹೇಳಿದೆ. ಸಂಘಟನೆಯು ಅಮೆರಿಕದಾದ್ಯಂತ ನಡೆಯುವ ಬಂದೂಕು ಹಿಂಸಾಚಾರಗಳನ್ನು ದಾಖಲಿಸುತ್ತದೆ ಎಂದು ಎಫೆ ನ್ಯೂಸ್ ವರದಿ ಮಾಡಿದೆ.

2018ರಲ್ಲಿ ಇವೇ ಕಾರಣಗಳಿಂದಾಗಿ 14,789 ಮಂದಿ ಮೃತಪಟ್ಟಿದ್ದಾರೆ.

2019ರಲ್ಲಿ ಇತರ 23,760 ಸಾವುಗಳು ಆತ್ಮಹತ್ಯೆಯಿಂದಾಗಿ ಸಂಭವಿಸಿವೆ.

ಗುಂಡು ಹಾರಾಟದಿಂದಾಗಿ 2019ರಲ್ಲಿ 11 ವರ್ಷಕ್ಕಿಂತ ಕೆಳಗಿನ 207 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 473 ಮಕ್ಕಳು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News