ರಶ್ಯ, ಚೀನಾ ಜೊತೆ ಇರಾನ್ ಜಂಟಿ ನೌಕಾ ಸಮರಾಭ್ಯಾಸ

Update: 2019-12-28 04:50 GMT

ಟೆಹರಾನ್, ಡಿ. 27: ಇರಾನ್ ನೌಕಾಪಡೆಯು ಶುಕ್ರವಾರ ರಶ್ಯ ಮತ್ತು ಚೀನಾಗಳ ನೌಕಾಪಡೆಗಳೊಂದಿಗಿನ ಮೊದಲ ಜಂಟಿ ಸಮರಾಭ್ಯಾಸವನ್ನು ಹಿಂದೂ ಮಹಾಸಾಗರದ ಉತ್ತರದ ಭಾಗದಲ್ಲಿ ಆರಂಭಿಸಿದೆ ಎಂದು ಇರಾನ್‌ನ ಸರಕಾರಿ ಟಿವಿ ವರದಿ ಮಾಡಿದೆ.

ಒಮಾನ್ ಕೊಲ್ಲಿಯಲ್ಲಿರುವ ಚಬಹಾರ್ ಬಂದರಿನಿಂದ ನಾಲ್ಕು ದಿನಗಳ ಸಮರಾಭ್ಯಾಸವನ್ನು ಆರಂಭಿಸಲಾಯಿತು. ಈ ವಲಯದ ಜಲಮಾರ್ಗಗಳ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಮರಾಭ್ಯಾಸ ನಡೆಸಲಾಗುತ್ತಿದೆ ಎಂದು ಸರಕಾರಿ ಟಿವಿ ಹೇಳಿದೆ.

ಮೂರು ದೇಶಗಳ ನೌಕಾಪಡೆಗಳ ನಡುವಿನ ವಿನಿಮಯ ಮತ್ತು ಸಹಕಾರವನ್ನು ಈ ಸಮರಾಭ್ಯಾಸವು ವಿಸ್ತರಿಸಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯನ್ ತಿಳಿಸಿದರು. ಚೀನಾ ನೌಕಾಪಡೆಯ ನಿರ್ದೇಶಿತ ಕ್ಷಿಪಣಿ ನಾಶಕ ನೌಕೆ ‘ಕ್ಸಿನಿಂಗ್’ ಈ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ ಎಂದು ಅವರು ಹೇಳಿದರು.

ಅಮೆರಿಕದ ಅಭೂತಪೂರ್ವ ಆರ್ಥಿಕ ದಿಗ್ಬಂಧನಗಳ ನಡುವೆಯೇ, ಚೀನಾ ಮತ್ತು ರಶ್ಯಗಳೊಂದಿಗೆ ಸೇನಾ ಸಹಕಾರವನ್ನು ಹೆಚ್ಚಿಸಲು ಇರಾನ್ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News