ಸಿಎಎ ವಿರುದ್ಧ ಪ್ರತಿಭಟನೆ: ಮುಸ್ಲಿಮರು ನಮಾಝ್ ಮಾಡಲು ಬಾಗಿಲು ತೆರೆದ ಚರ್ಚ್

Update: 2019-12-29 15:55 GMT
Photo: facebook.com/sayyidmunavvaralishihab

ಕೊಚ್ಚಿ: ಚರ್ಚ್ ಒಂದರ ಆವರಣದಲ್ಲಿ ನೂರಾರು ಮುಸ್ಲಿಮರು ನಮಾಝ್ ಮಾಡುತ್ತಿರುವ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಲ್ಲಿನ ಕೋತಮಂಗಲಂನ 'ಮಾರ್ತೋಮಾ ಚೆರಿಯಪಳ್ಳಿ' ಎಂದೇ ಪ್ರಸಿದ್ಧವಾದ ಸಂತ ಥಾಮಸ್ ಚರ್ಚ್ ಸೌಹಾರ್ದ ಮೆರೆದು ಮಾದರಿಯಾಗಿದೆ.

ಕೇಂದ್ರ ಸರಕಾರದ ಪೌರತ್ವ ಕಾಯ್ದೆ ವಿರುದ್ಧ ಕೋತಮಂಗಲಂನಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಪ್ರತಿಭಟನೆ ಮುಕ್ತಾಯಗೊಳ್ಳುವಾಗ ತಡವಾಗಿದ್ದು, ನಮಾಝ್ ಮಾಡಲು ಮುಸ್ಲಿಮರಿಗೆ ಸ್ಥಳ ಬೇಕಾಗಿತ್ತು. ಈ ಸಂದರ್ಭ ಇಲ್ಲಿನ ಚರ್ಚ್ ಆವರಣದಲ್ಲಿ ನಮಾಝ್ ಗಾಗಿ ಸ್ಥಳಾವಕಾಶ ನೀಡಲಾಯಿತು.

"ಅದು ಜಾತ್ಯಾತೀತ ಜಾಥಾ ಆಗಿತ್ತು. ಬೇರೆ ಬೇರೆ ಧರ್ಮಗಳ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಮುಗಿಯುವ ಹೊತ್ತಿಗೆ ನಮಾಝ್ ಸಮಯವಾಗಿತ್ತು. ಮಸೀದಿ ದೂರದಲ್ಲಿರುವ ಕಾರಣ ನಾವು ನಮಾಝ್ ಮಾಡುವುದಕ್ಕಾಗಿ ಚರ್ಚ್ ಆಡಳಿತಾಧಿಕಾರಿಗಳಲ್ಲಿ ಮನವಿ ಮಾಡಿದೆವು. ಅವರು ಒಪ್ಪಿಕೊಂಡದ್ದು ಮಾತ್ರವಲ್ಲ, ನಮಾಝ್ ಗಾಗಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದರು" ಎಂದು ಪ್ರತಿಭಟನೆಯಲ್ಲಿದ್ದವರೊಬ್ಬರು ಹೇಳಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News