ಶೈಕ್ಷಣಿಕ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ: ಪ್ರೊ.ಕೆ.ಆರ್.ವೇಣುಗೋಪಾಲ್

Update: 2019-12-30 17:52 GMT

ಬೆಂಗಳೂರು, ಡಿ.30: ಶೈಕ್ಷಣಿಕ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಬೆಂವಿವಿಯ ಯುಜಿಸಿ-ಎಚ್‌ಆರ್‌ಡಿಸಿ ವಿಭಾಗವು ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ನ್ಯಾಕ್ ಜಾಗೃತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸತ್ಯ ಮತ್ತು ನಿಷ್ಠೆಯ ಕೊರತೆಯುಂಟಾಗಿ ಸಂಸ್ಥೆಗಳು ವ್ಯಕ್ತಿ ಅಥವಾ ಒಂದು ಗುಂಪಿನ ಸ್ವಾರ್ಥಕ್ಕೆ ದುಡಿಯುತ್ತಿರುವುದು ವಿಷಾದನೀಯ ಎಂದು ಹೇಳಿದರು. ಸರಿಯಾದ ಸಂದರ್ಭದಲ್ಲಿ ನ್ಯಾಕ್ ಮಾನ್ಯತೆಯ ಮರುಪರೀಶಿಲನೆಗೆ ಸಂಸ್ಥೆಗಳು ಒಳಗಾಗುವ ಮೂಲಕ ಸರಕಾರಿ ಅನುದಾನಗಳನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕು. ನ್ಯಾಕ್ ಮಾನ್ಯತೆಗೆ ಹೊಗುವ ಮೊದಲಿಗೆ ಶಿಕ್ಷಕ ಮತ್ತು ಸಂಶೋಧನೆ ವಿಷಯ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಕಿವಿಮಾತು ಹೇಳಿದರು.

ಬೆಂಗಳೂರು ವಿವಿಯ ಕುಲ ಸಚಿವರಾದ ಪ್ರೊ.ಬಿ.ಕೆ.ರವಿ ಮಾತನಾಡಿ, ವಿದ್ಯಾಸಂಸ್ಥೆಗಳು ನ್ಯಾಕ್ ಮಾನ್ಯತೆ ಪಡೆಯುವ ಸಾಮರ್ಥ್ಯ ಹೊಂದಿದರು ಹಿಂದೇಟು ಹಾಕುವುದು ಸರಿಯಲ್ಲ, ಒಂದು ವೇಳೆ ನ್ಯಾಕ್ ಮಾನ್ಯತೆ ರದ್ದಾದರೆ ಸಂಸ್ಥೆಗಳಿಗೆ ಸಿಗಬೇಕಾದ ಸರಕಾರಿ ಆರ್ಥಿಕ ಸಹಾಯ ಮೊಟಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಬೆಂವಿವಿಯ ಯುಜಿಸಿ-ಎಚ್‌ಆರ್‌ಡಿಸಿಯ ನಿರ್ದೇಶಕ ಪ್ರೊ.ಸಿ.ಶ್ರೀನಿವಾಸ್, ಯುಜಿಸಿ-ಎಚ್‌ಆರ್‌ಡಿಸಿಯ ಸಹಪ್ರಾಧ್ಯಾಪಕ ಡಾ.ಅರುಣ್ ವಿದ್ಯಾ ಉಪಸ್ಥಿತರಿದ್ದರು.

ಬಿಜೆಪಿಯ ಪಾಲಿಕೆ ಸದಸ್ಯರು ಪೇಜಾವರ ಶ್ರೀ ವಿಶ್ವೇಶತೀರ್ಥರ ನಿಧನದ ಹಿನ್ನೆಲೆ ಶೋಕಾಚರಣೆ ಆಚರಿಸಲಾಗುತ್ತಿದೆ. ಈ ವೇಳೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಪಾಲ್ಗೊಂಡು ವಿಜಯೋತ್ಸವ ಆಚರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚುನಾವಣೆಯಿಂದ ಸದಸ್ಯರೇ ಹೊರಗುಳಿದಿದ್ದಾರೆ.

-ಮುನೀಂದ್ರ ಕುಮಾರ್, ಆಡಳಿತ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News