ವಿಜಯ ಮಲ್ಯ ಆಸ್ತಿ ಹರಾಜು ಮಾಡಲು ಬ್ಯಾಂಕುಗಳಿಗೆ ನ್ಯಾಯಾಲಯ ಅನುಮತಿ

Update: 2020-01-01 07:29 GMT

ಹೊಸದಿಲ್ಲಿ, ಜ.1: ಬ್ಯಾಂಕುಗಳಿಗೆ ವಂಚಿಸಿ   ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ  ವಿಜಯ್ ಮಲ್ಯ ಅವರ ಜಪ್ತಿ ಮಾಡಿರುವ ಆಸ್ತಿಯನ್ನು ಹರಾಜು ಹಾಕುವ  ಮೂಲಕ ಸಾಲ ವಸೂಲಿ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ  ಬ್ಯಾಂಕುಗಳಿಗೆ ವಿಶೇಷ  ನ್ಯಾಯಾಲಯ (ಪಿಎಂಎಲ್‌ಎ ನ್ಯಾಯಾಲಯ) ಅನುಮತಿ ನೀಡಿದೆ.

ಈಗಾಗಲೇ  13,000 ಕೋಟಿ ರೂ.ಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಈ ಸೊತ್ತುಗಳನ್ನು ಹರಾಜು ಮಾಡಲಿದೆ. ಆದರೆ ಜನವರಿ 18 ರ ನಂತರವೇ ಆದೇಶಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಆದೇಶಗಳ ಬಗ್ಗೆ ಸಂಬಂಧಪಟ್ಟವರು  ಬಾಂಬೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ

ಅಕ್ರಮ ಹಣ ವರ್ಗಾವಣೆ  ಆರೋಪ ಹೊತ್ತಿರುವ ವಿಜಯ್ ಮಲ್ಯ ಅವರು ಮಾರ್ಚ್ 2016 ರಲ್ಲಿ ಲಂಡನ್‌ಗೆ ಪರಾರಿಯಾಗಿದ್ದಾರೆ. 2017 ರಲ್ಲಿ ಅವರನ್ನು  ಬಂಧಿಸಲಾಗಿದ್ದರೂ  ಜಾಮೀನು ಮೂಲಕ ಬಿಡುಗಡೆಯಾಗಿದ್ದಾರೆ.

ಉದ್ಯಮಿ ವಿಜಯ್ ಮಲ್ಯ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿಗಳ ಸಾಲವನ್ನು ಮರುಪಾವತಿಸದೆ  ಲಂಡನ್ ಗೆ ಪರಾರಿಯಾಗಿದ್ದರು. ವಿಜಯ ಮಲ್ಯ ಅವರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಮತ್ತು ಭಾರತೀಯ ತನಿಖಾ ಸಂಸ್ಥೆಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿವೆ, ಆದರೆ ಇದುವರೆಗೂ ಯಶಸ್ವಿಯಾಗಿಲ್ಲ.

2019 ರ ಡಿಸೆಂಬರ್ ನಲ್ಲಿ  ಲಂಡನ್ ನ್ಯಾಯಾಲಯವು ಮಲ್ಯ ಪ್ರಕರಣದ  ತೀರ್ಪನ್ನು ಕಾಯ್ದಿರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಲಂಡನ್ ನ್ಯಾಯಾಲಯವು 2020 ರ ಜನವರಿಯಲ್ಲಿ ವಿಜಯ್ ಮಲ್ಯ ಅವರ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News