ಚಪ್ಪಲಿಯಿಂದ ಥಳಿಸಿದ್ದು ಒಳ್ಳೆಯ ಕೆಲಸ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2020-01-01 12:35 GMT

ಬೆಂಗಳೂರು, ಜ.1: ಸಂಭ್ರಮಾಚರಣೆ ವೇಳೆ ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿಗೆ ಯುವತಿ ಚಪ್ಪಲಿಯಿಂದ ಥಳಿಸಿದ್ದು ಒಳ್ಳೆಯ ಕೆಲಸ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಘಟನೆಗಳಲ್ಲಿ ಕಿಡಿಗೇಡಿಗಳಿಗೆ ಯುವತಿಯರೇ ಬುದ್ಧಿ ಕಲಿಸಿದ್ದಾರೆ. ಕಿಡಿಗೇಡಿಗಳಿಗೆ ಚಪ್ಪಲಿಯಲ್ಲಿ ಥಳಿಸಿದ್ದು ಒಳ್ಳೆಯ ಕೆಲಸವಾಗಿದ್ದು, ಹೆಣ್ಣು ಮಕ್ಕಳು ಧೈರ್ಯದಿಂದ ತಪ್ಪಿತಸ್ಥರಿಗೆ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ಬೆಂಗಳೂರು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕೆ ಜನರ ಸಹಕಾರವೇ ಪ್ರಮುಖ ಕಾರಣ ಎಂದ ಅವರು, ಕೆಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಸಂಬಂಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

426 ಪ್ರಕರಣ ದಾಖಲು

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಆರೋಪದಡಿ 426 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಸಂಚಾರ ಪೊಲೀಸರು, ತಪ್ಪಿತಸ್ಥ ಚಾಲಕರಿಂದ ಭಾರೀ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News