70 ಅಡಿ ಆಳಕ್ಕೆ ಬಿದ್ದ ಲಿಫ್ಟ್: ಒಂದೇ ಕುಟುಂಬದ 6 ಮಂದಿ ಮೃತ್ಯು

Update: 2020-01-01 16:49 GMT
ಸಾಂದರ್ಭಿಕ ಚಿತ್ರ

ಭೋಪಾಲ್, ಜ. 1: ಇಂದೋರ್‌ನ ಪಟಾಲ್ಪಾನಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಮಂಗಳವಾರ ರಾತ್ರಿ ಎಲಿವೇಟರ್ 70 ಅಡಿ ಆಳಕ್ಕೆ ಕುಸಿದ ಪರಿಣಾಮ ಮಧ್ಯಪ್ರದೇಶದ ಪ್ರಮುಖ ಉದ್ಯಮಿ ಹಾಗೂ ಅವರ ಕುಟುಂಬದ ಐವರು ಸದಸ್ಯರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಪುನೀತ್ ಅಗರ್ವಾಲ್ (53) ಅವರ ಪುತ್ರಿ ಪಾಲಕ್ ಅಗರ್ವಾಲ್ (27), ಅಳಿಯ ಪಾಲ್ಕೇಶ್ ಅಗರ್ವಾಲ್ (28), ಮೊಮ್ಮಗ ನವ್ (2) ಹಾಗೂ ಸಂಬಂಧಿಕರಾದ ಗೌರವ್ (40), ಆರ್ಯವೀರ್ (11) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬದುಕುಳಿದ ನಿಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ.

ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ಪುನೀತ್ ಅಗರ್ವಾಲ್, ಅವರ ಕುಟುಂಬ ಹಾಗೂ ಸಂಬಂಧಿಕರು ಪಟಾಲ್ಪಾನಿ ಪ್ರದೇಶದಲ್ಲಿರುವ ಫಾರ್ಮಹೌಸ್‌ಗೆ ಮಂಗಳವಾರ ತೆರಳಿದ್ದರು. ಅವರು ಅಲ್ಲಿದ್ದ ಕಟ್ಟಡದ ಕೊನೆ ಮಹಡಿಗೆ ತೆರಳಿ ಸುತ್ತಮುತ್ತಲಿನ ದೃಶ್ಯಗಳನ್ನು ವೀಕ್ಷಿಸಿ ಕೆಳಗಿಳಿಯುತ್ತಿದ್ದಾಗ ಲಿಫ್ಟ್ 70 ಅಡಿ ಆಳಕ್ಕೆ ಕುಸಿದು ಈ ದುರ್ಘಟನೆ ಸಂಭವಿಸಿದೆ ಎಂದು ಬಾಡ್ಗೊಂಡಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಬರ್ಟ್ ಗಿರ್ವಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News