ಹುಟ್ಟಿದ ದಿನದಂದು ತಾಪಮಾನ ವಿರೋಧಿ ಧರಣಿ ನಡೆಸಿದ ಗ್ರೆಟಾ

Update: 2020-01-04 14:55 GMT
ಫೈಲ್ ಚಿತ್ರ

ಸ್ಟಾಕ್‌ಹೋಮ್ (ಸ್ವೀಡನ್), ಜ. 4: ‘‘ನಾನು ಹುಟ್ಟು ಹಬ್ಬಗಳನ್ನು ಆಚರಿಸುವಂಥ ವ್ಯಕ್ತಿಯಲ್ಲ’’ ಎಂದು ಶುಕ್ರವಾರ 17ನೇ ವರ್ಷಕ್ಕೆ ಕಾಲಿರಿಸಿದ ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಹೇಳಿದ್ದಾರೆ.

ಬದಲಿಗೆ, ಅವರು ತನ್ನ ಹುಟ್ಟಿದ ದಿನವನ್ನು ಸ್ವೀಡನ್ ಸಂಸತ್ತಿನ ಹೊರಗೆ ಏಳು ಗಂಟೆಗಳ ಜಾಗತಿಕ ತಾಪಮಾನ ವಿರೋಧಿ ಧರಣಿ ನಡೆಸುವ ಮೂಲಕ ಅತ್ಯಂತ ವಿಶಿಷ್ಟವಾಗಿ ಆಚರಿಸಿದರು.

ಪರಿಸರ ಹೋರಾಟಗಾರ್ತಿಯು ಕೊರೆಯುವ ಚಳಿಯನ್ನು ಲೆಕ್ಕಿಸದೆ ಸ್ಟಾಕ್‌ಹೋಮ್‌ನಲ್ಲಿ, ವಾರಕ್ಕೊಮ್ಮೆ ನಡೆಯುವ ‘ಶುಕ್ರವಾರದ ಶಾಲಾ ಮುಷ್ಕರ’ ಚಳವಳಿಯನ್ನು ಮುಂದುವರಿಸಿದರು. ಈ ಚಳವಳಿಯ ಮೂಲಕವೇ ಅವರು ಅಂತರ್‌ರಾಷ್ಟ್ರೀಯ ಖ್ಯಾತಿಗೆ ಬಂದಿದ್ದಾರೆ.

‘‘ನಾನು ಎಂದಿನಂತೆ ಬೆಳಗ್ಗೆ 8 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಇಲ್ಲಿ ಧರಣಿ ಮಾಡುತ್ತೇನೆ. ಬಳಿಕ ಮನೆಗೆ ಹೋಗುತ್ತೇನೆ’’ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ತನ್‌ಬರ್ಗ್ ಹೇಳಿದರು.

ತನ್‌ಬರ್ಗ್ 2019ರ ‘ಟೈಮ್’ ಮ್ಯಾಗಝಿನ್‌ನ ವರ್ಷದ ವ್ಯಕ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News