ಮಕ್ಕಳು, ಗರ್ಭಿಣಿಯರಿಗೂ ಥಳಿಸಿದ ಪೊಲೀಸರು: ಪ್ರಿಯಾಂಕಾ ಗಾಂಧಿ ಆರೋಪ

Update: 2020-01-04 16:16 GMT

ಲಕ್ನೊ, ಜ.4: ಉತ್ತರಪ್ರದೇಶದ ಮುಝಫರ್ ನಗರದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದ ಹಿಂಸಾಚಾರದಲ್ಲಿ ಗಾಯಗೊಂಡವರ ಮನೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಭೇಟಿ ನೀಡಿದರು.

ಗಾಯಗೊಂಡವರ ಆರೋಗ್ಯ ವಿಚಾರಿಸಿದ ಬಳಿಕ ಕುಟುಂಬದ ಸದಸ್ಯರಲ್ಲಿ ಧೈರ್ಯ ತುಂಬಿದ ಪ್ರಿಯಾಂಕಾ, ಇಂತಹ ಕಷ್ಟದ ದಿನದಲ್ಲಿ ಅವರೊಂದಿಗೆ ತಾನು ಹಾಗೂ ಪಕ್ಷ ನಿಲ್ಲಲಿದೆ ಎಂದು ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಕ್ಕಳು, ಮಹಿಳೆಯರೆನ್ನದೆ ಎಲ್ಲರನ್ನೂ ಪೊಲೀಸರು ಥಳಿಸಿದ್ದಾರೆ. 22 ವರ್ಷದ ಗರ್ಭಿಣಿ ಮಹಿಳೆಯ ಮೇಲೂ ಹಲ್ಲೆ ನಡೆದಿದೆ. ಅಪ್ರಾಪ್ತ ವಯಸ್ಸಿನವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದರು.

 ಕಳೆದ ವಾರ ಲಕ್ನೊಗೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ, ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ಸಂದರ್ಭ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಳಿಕ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್‌ಗೆ ಸಲ್ಲಿಸಿದ್ದ ಸುದೀರ್ಘ ಪತ್ರದಲ್ಲಿ ಪೊಲೀಸರ ಅತಿರೇಕದ ಕ್ರಮದ ಬಗ್ಗೆ ವಿವರಿಸಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News