ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ: ಬೆಳವಣಿಗೆಗಳು ಗಂಭೀರ ತಿರುವು ಪಡೆದುಕೊಂಡಿವೆ: ಭಾರತ

Update: 2020-01-05 17:54 GMT

ಹೊಸದಿಲ್ಲಿ, ಜ.5: ಅಮೆರಿಕ ಮತ್ತು ಇರಾನ್ ನಡುವಿನ ಪ್ರಸಕ್ತ ಬಿಕ್ಕಟ್ಟು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬಣ್ಣಿಸಿದ್ದಾರೆ.

‘ಈಗಷ್ಟೇ ಇರಾನಿನ ವಿದೇಶಾಂಗ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಬೆಳವಣಿಗೆಗಳು ಅತ್ಯಂತ ಗಂಭೀರ ತಿರುವು ಪಡೆದುಕೊಂಡಿರುವುದನ್ನು ಗಮನಿಸಿದ್ದೇನೆ. ಪ್ರದೇಶದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯ ಬಗ್ಗೆ ಭಾರತಕ್ಕೆ ತೀವ್ರ ಕಳವಳಗಳಿವೆ. ಪರಸ್ಪರ ಸಂಪರ್ಕದಲ್ಲಿರಲು ನಾವು ಒಪ್ಪಿಕೊಂಡಿದ್ದೇವೆ ’ಎಂದು ಜೈಶಂಕರ್ ಅವರು ರವಿವಾರ ಸಂಜೆ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇರಾಕ್ ದಾಳಿಯ ನಂತರ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಅವರು ಹಲವಾರು ದೇಶಗಳ ವಿದೇಶಾಂಗ ಸಚಿವರು ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಕರೆ ಮಾಡಿದ್ದಾರೆ,ಆದರೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿಲ್ಲ. ಭಾರತವು ಇರಾನಿನ ಸಾಂಪ್ರದಾಯಿಕ ಮಿತ್ರರಾಷ್ಟ್ರವಾಗಿದೆ.

‘ಉದ್ವಿಗ್ನತೆ ಹೆಚ್ಚಿರುವುದು ವಿಶ್ವಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಈ ಪ್ರದೇಶದಲ್ಲಿ ಶಾಂತಿ,ಸ್ಥಿರತೆ ಮತ್ತು ಸುರಕ್ಷತೆ ಭಾರತಕ್ಕೆ ತುಂಬ ಮುಖ್ಯವಾಗಿವೆ. ಪರಿಸ್ಥಿತಿಯು ಇನ್ನಷ್ಟು ಹದಗೆಡದಿರುವುದು ಮಹತ್ವದ್ದಾಗಿದೆ. ಭಾರತವು ನಿರಂತರವಾಗಿ ಸಹನೆಯನ್ನು ಪ್ರತಿಪಾದಿಸಿದೆ ಮತ್ತು ಅದನ್ನು ಮುಂದುವರಿಸಲಿದೆ ’ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News