ಇರಾನ್ ಆಕಸ್ಮಿಕವಾಗಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿರುವ ಸಾಧ್ಯತೆ: ಅಮೆರಿಕ ಅಧಿಕಾರಿಗಳು

Update: 2020-01-09 18:32 GMT

ವಾಷಿಂಗ್ಟನ್, ಜ. 9: ಎಲ್ಲಾ 176 ಪ್ರಯಾಣಿಕರು ಸಾವನ್ನಪ್ಪಲು ಕಾರಣವಾದ ಇರಾನ್‌ನಲ್ಲಿ ಪತನಗೊಂಡ ಉಕ್ರೇನ್‌ನ ವಿಮಾನವನ್ನು ಇರಾನ್‌ನ ವಾಯು ಪಡೆ ಆಕಸ್ಮಿಕವಾಗಿ ಹೊಡೆದುರುಳಿಸಿರುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ವಿಮಾನ ಪತನದ ಬಗ್ಗೆ ತನಗೆ ತುಂಬಾ ನೋವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವಿಮಾನ ಪತನವಾಗುವುದಕ್ಕಿಂತ ಕೆಲವೇ ಕ್ಷಣ ಮುನ್ನ ಎರಡು ಕ್ಷಿಪಣಿಗಳು ಉಡಾವಣೆಗೊಂಡಿರುವುದು ಹಾಗೂ ಅದನ್ನು ಅನುಸರಿಸಿ ಸ್ಫೋಟ ಸಂಭವಿಸಿರುವ ಪುರಾವೆಗಳನ್ನು ಅಮೆರಿಕದ ಉಪಗ್ರಹ ಪತ್ತೆ ಹಚ್ಚಿದೆ ಎಂದು ಅಮೆರಿಕದ ಒಬ್ಬರು ಅಧಿಕಾರಿ ತಿಳಿಸಿದ್ದಾರೆ.

ಉಕ್ರೇನ್‌ನ ವಿಮಾನವನ್ನು ಆಕಸ್ಮಿಕವಾಗಿ ಹೊಡೆದುರುಳಿಸಲಾಗಿದೆ ಎಂದು ವಾಷಿಂಗ್ಟನ್ ಭಾವಿಸಿದ್ದಾರೆ ಎಂದು ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, ಪ್ರಮಾದದಿಂದ ವಿಮಾನ ಪತನವಾಗಿರುವ ಸಾಧ್ಯತೆ ಇದೆ. ವಿಮಾನ ಪತನಗೊಂಡ ಬಗ್ಗೆ ತನಗೆ ನೋವಿದೆ ಎಂದಿದ್ದಾರೆ. ಕೆಲವರು ಪ್ರಮಾದ ಎಸಗಿರುವ ಸಾಧ್ಯತೆ ಇದೆ. ಈ ಪತನದ ಬಗ್ಗೆ ತನಗೆ ಸಂಶಯ ಇದೆ ಎಂದು ಟ್ರಂಪ್ ವೈಟ್‌ಹೌಸ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಅವರು ಯಾವುದೇ ವಿವರ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News