ಜಮ್ಮುಕಾಶ್ಮೀರ ಹಿಮಪಾತ: 67 ಸಾವು

Update: 2020-01-15 18:37 GMT

ಶ್ರೀನಗರ, ಜ. 15: ಕಾಶ್ಮೀರದಲ್ಲಿ ಕಳೆದ 24 ಗಂಟೆಗಳ ಕಾಲ ಸಂಭವಿಸಿದ ಹಿಮಪಾತದಿಂದ ಮೂವರು ಯೋಧರು ಹಾಗೂ ಇತರರ ಸಹಿತ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಆದರೆ, ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಭಾರೀ ಹಿಮಪಾತದಿಂದ 57ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರವುಗೊಳಿಸಲು ಹಾಗೂ ಹೆದ್ದಾರಿಯಲ್ಲಿ ವಾಹನ ಸಂಚಾರ ಮರು ಆರಂಭಿಸಲು ಸ್ಥಳೀಯಾಡಳಿತ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಮುಝಪ್ಫರ್‌ಪುರದ ವರದಿಯೊಂದು ತಿಳಿಸಿದೆ. ಭಾರೀ ಹಿಮಪಾತ ಹಾಗೂ ಮಳೆಯಿಂದಾದ ಭೂಕುಸಿತದಿಂದ ಹಲವು ಗ್ರಾಮಸ್ಥರು ಸಿಲುಕಿಕೊಂಡಿದ್ದಾರೆ ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸಾವನ್ನಪ್ಪಿದ್ದಾರೆ ಎಂದು ಆತಂಕಪಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರ ಕಣಿವೆಯ ಬಯಲು, ಮೇಲ್ಭಾಗದ ಪ್ರದೇಶ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರವಿವಾರ ಹಾಗೂ ಸೋಮವಾರ ಭಾರಿ ಹಿಮಪಾತವಾಗಿತ್ತು. ಇದರಿಂದ ಹಿಮಾಲಯ ವಲಯದ ವಿವಿಧ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News