ದವೀಂದರ್ ಸಿಂಗ್ ಪದಕ ವಾಪಸ್ ಪಡೆದ ಸರ್ಕಾರ

Update: 2020-01-16 03:36 GMT

ಶ್ರೀನಗರ, ಜ.16: ಉಗ್ರರ ಜತೆ ನಂಟು ಹೊಂದಿದ ಆರೋಪದಲ್ಲಿ ಬಂಧಿಸಲ್ಪಟ್ಟ ಡಿಎಸ್ಪಿ ದವೀಂದರ್ ಸಿಂಗ್‌ಗೆ ಈ ಹಿಂದೆ ನೀಡಿದ್ದ ‘ಶೇರ್ ಇ ಕಾಶ್ಮೀರ್’ ಪೊಲೀಸ್ ಪದಕವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಾಪಸ್ ಪಡೆದಿದೆ.

ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಾಬ್ರಾ ಅವರು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿ, ದವೀಂದರ್ ಸಿಂಗ್‌ಗೆ ನೀಡಿರುವ ಪದಕ ವಾಪಸ್ ಪಡೆದಿದ್ದಾರೆ.

"ಉಗ್ರರಿಗೆ ಜಮ್ಮು ಕಾಶ್ಮೀರದಿಂದ ಹೊರಹೋಗಲು ಅವಕಾಶ ಮಾಡಿಕೊಟ್ಟ ದವೀಂದರ್ ಸಿಂಗ್‌ನನ್ನು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಹಿಂದೆ ನೀಡಲಾಗಿದ್ದ ಶೇರ್ ಇ ಕಾಶ್ಮೀರ್ ಪೊಲೀಸ್ ಪದಕ ವಾಪಸ್ ಪಡೆಯಲಾಗಿದೆ. ಇದು ಅವಿಧೇಯತೆ ಮತ್ತು ಇಲಾಖೆಗೆ ಕೆಟ್ಟ ಹೆಸರು ತರುವ ಕ್ರಮವಾಗಿದೆ" ಎಂದು ಆದೇಶದಲ್ಲಿ ವಿವರಿಸಲಾಗಿದೆ. 2018ರ ಆಗಸ್ಟ್ 14ರಂದು ಇವರಿಗೆ ಪದಕ ಘೋಷಿಸಲಾಗಿತ್ತು.

2019ರ ಸ್ವಾತಂತ್ರ ದಿನದಂದು ದವೀಂದರ್ ಸಿಂಗ್‌ನ ರಾಷ್ಟ್ರಪತಿ ಪದಕ ನೀಡಲಾಗಿತ್ತು ಎಂಬ ವರದಿಗಳನ್ನು ಇಲಾಖೆ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News