ಸಿಎಎ ಜಾರಿಗೊಳಿಸದೆ ಬೇರೆ ಮಾರ್ಗವಿಲ್ಲ: ಕೇರಳ ರಾಜ್ಯಪಾಲ

Update: 2020-01-18 14:49 GMT

ಜೈಪುರ(ರಾಜಸ್ಥಾನ),ಜ.18: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯು ಕೇಂದ್ರದ ಅಧೀನಕ್ಕೊಳಪಟ್ಟಿದೆ ಮತ್ತು ಅದು ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಹೊರತಾಗಿದೆ,ಆದ್ದರಿಂದ ರಾಜ್ಯಗಳಿಗೆ ಅದನ್ನು ಜಾರಿಗೊಳಿಸದೆ ಅನ್ಯಮಾರ್ಗವಿಲ್ಲ ಎಂದು ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಶನಿವಾರ ಇಲ್ಲಿ ಹೇಳಿದರು.

ಸಿಎಎ ಜಾರಿಯನ್ನು ಕೆಲವು ರಾಜ್ಯಗಳು ನಿರಾಕರಿಸುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು,ಕಾಯ್ದೆಯ ಜಾರಿ ಹೊರತು ಗತ್ಯಂತರವಿಲ್ಲ. ಸಂವಿಧಾನದ ವಿಧಿ 254ರಡಿ ಅದನ್ನು ಜಾರಿಗೊಳಿಸಲೇಬೇಕು ಎಂದು ತಿಳಿಸಿದರು.

ಇಲ್ಲಿಯ ಖಾಸಗಿ ವಿವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಪ್ರತಿಯೊಬ್ಬರಿಗೂ ತಮ್ಮ ಅಧಿಕಾರ ವ್ಯಾಪ್ತಿ ಗೊತ್ತಿರಬೇಕು. ನೀವು ನಿಮ್ಮ ಬುದ್ಧಿಯನ್ನು ಬಳಸಿ ವಾದವನ್ನು ಮುಂದಿಡಬಹುದು,ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ನಿಮಗಿದೆ. ಆದರೆ ಪೌರತ್ವ ಕಾಯ್ದೆಯು ಕೇಂದ್ರದ ಅಧೀನ ವಿಷಯವಾಗಿದೆಯೇ ಹೊರತು ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದರು. ಜನರು ತಮ್ಮ ಅಭಿಪ್ರಾಯದ ಬಗ್ಗೆ ಪಟ್ಟು ಹಿಡಿಯಬಹುದು,ಆದರೆ ಅವರು ಕಾನೂನಿನ ಗಡಿಯನ್ನು ಮೀರುವಂತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News