ಪಾಕಿಸ್ತಾನಿಯರು ಭಾರತ ಪ್ರವೇಶಿಸಬಹುದಾದರೆ ನಾವೇಕೆ ಬೆಳಗಾವಿಗೆ ಹೋಗಬಾರದು: ಸಂಜಯ್ ರಾವತ್

Update: 2020-01-18 16:01 GMT

ಮುಂಬೈ, ಜ.18: ಬೆಳಗಾವಿಗೆ ಭೇಟಿ ನೀಡದಂತೆ ತಮ್ಮನ್ನು ಕರ್ನಾಟಕ ಸರಕಾರ ತಡೆದಿದೆ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಪಾಕಿಸ್ತಾನೀಯರು, ಬಾಂಗ್ಲಾದೇಶೀಯರು ಮತ್ತು ರೊಹಿಂಗ್ಯಾಗಳು ಭಾರತವನ್ನು ಪ್ರವೇಶಿಸಬಹುದು. ಆದರೆ ಮಹಾರಾಷ್ಟ್ರದವರು ಬೆಳಗಾವಿಗೆ ಹೋಗಬಾರದು ಎಂಬುದು ಸರಿಯಲ್ಲ. ಬೆಳಗಾವಿ ವಿಷಯದಲ್ಲಿ ವಿವಾದವಿರುವುದು ನಿಜ, ಆದರೆ ಎರಡೂ ರಾಜ್ಯಗಳ ಮಧ್ಯೆ ನಿರ್ಬಂಧ ವಿಧಿಸುವಷ್ಟು ಮುಂದುವರಿಯಬಾರದು ಎಂದು ಮುಂಬೈಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರಾವತ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಆಯೋಜನೆಯಾಗಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ನಾನು ಹೋಗುತ್ತಿದ್ದೇನೆ. ನಿರ್ಬಂಧ ವಿಧಿಸುವುದಾದರೆ ವಿಧಿಸಲಿ ಎಂದು ರಾವತ್ ಹೇಳಿದ್ದಾರೆ.

1980ರಲ್ಲಿ ಭಾಷಾವಾರು ಪ್ರಾಂತ್ಯದ ವಿಷಯದಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ಮರಾಠಿ ಕಾರ್ಯಕರ್ತರ ಸ್ಮರಣಾರ್ಥ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಬೇಕಿದ್ದ ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ್ ಯದ್ರಾವ್ಕರ್‌ರನ್ನು ಪೊಲೀಸರು ತಡೆದು ವಶಕ್ಕೆ ಪಡೆದ ಘಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News