ಜಮ್ಮು-ಕಾಶ್ಮೀರ: ಪ್ರಿಪೇಯ್ಡ್ ಮೊಬೈಲ್ ಎಸ್‌ಎಂಎಸ್, ವಾಯ್ಡ್ ಕಾಲ್ ಸೇವೆ ಪುನಾರಂಭ

Update: 2020-01-18 18:33 GMT

ಶ್ರೀನಗರ, ಜ.18: ಪ್ರಿಪೇಯ್ಡಿ ಮೊಬೈಲ್ ಬಳಕೆದಾರರಿಗೆ ಧ್ವನಿಕರೆ (ವಾಯ್ಸಿಕಾಲ್) ಮತ್ತು ಎಸ್‌ಎಂಎಸ್ ಸೇವೆಗಳನ್ನು ಶನಿವಾರದಿಂದ ಮರುಸ್ಥಾಪಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ತಿಳಿಸಿದೆ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಎಲ್ಲಾ ಸ್ಥಳೀಯ ಪ್ರಿಪೇಯ್ಡ್ ಮೊಬೈಲ್‌ಗಳಿಗೆ ವಾಯ್ಡ್ ಮತ್ತು ಎಸ್ಸೆಮ್ಮೆಸ್ ಸೌಲಭ್ಯಗಳನ್ನು ಮರುಸ್ಥಾಪಿಸಲು ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದ್ದಾರೆ.

ಜಮ್ಮುವಿನ ಎಲ್ಲಾ 10 ಜಿಲ್ಲೆಗಳಲ್ಲಿ, ಕುಪ್ವಾರ, ಬಂಡಿಪೋರ ಮತ್ತು ಕಾಶ್ಮೀರ ವಿಭಾಗದಲ್ಲಿ ಶ್ವೇತಪಟ್ಟಿಯ (ವೈಟ್‌ಲಿಸ್ಟೆಡ್) ವೆಬ್‌ಸೈಟ್‌ಗಳನ್ನು ಪೋಸ್ಟ್‌ಪೇಯ್ಡ್ ಮೊಬೈಲ್‌ನಲ್ಲಿ 2ಜಿ ಡೇಟಾ ಮೂಲಕ ಸಂಪರ್ಕಿಸಲು ಅವಕಾಶ ನೀಡಲಾಗುವುದು ಎಂದವರು ಹೇಳಿದ್ದಾರೆ.

ಆದರೆ ಬುದ್‌ಗಾಂವ್, ಗಂಡೇರ್‌ಬಾಲ್, ಬಾರಾಮುಲ್ಲ, ಶ್ರೀನಗರ, ಕುಲ್‌ಗಾಂವ್, ಅನಂತನಾಗ್ , ಶೋಪಿಯಾನ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ನಿಬರ್ಂಧ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಆಗಸ್ಟ್ 4ರಿಂದ ಪ್ರಿಪೇಯ್ಡ್ ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News