ಅಲ್ಲಿ ಅಶ್ಲೀಲ ಚಿತ್ರಗಳನ್ನು ಮಾತ್ರ ವೀಕ್ಷಿಸುತ್ತಾರೆ: ಕಾಶ್ಮೀರದ ಇಂಟರ್ನೆಟ್ ನಿರ್ಬಂಧ ಸಮರ್ಥಿಸಿದ ನೀತಿ ಆಯೋಗದ ಸದಸ್ಯ

Update: 2020-01-19 09:37 GMT

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 5 ತಿಂಗಳ ಕಾಲ ಇಂಟರ್ ನೆಟ್ ನಿಷೇಧಿಸಿರುವುದರಿಂದ ಆರ್ಥಿಕತೆಗೆ ಯಾವುದೇ ಸಮಸ್ಯೆಯಾಗಿಲ್ಲ. ಏಕೆಂದರೆ ಅಲ್ಲಿ ಇಂಟರ್ ನೆಟ್ ಮೂಲಕ 'ಅಶ್ಲೀಲ ಚಿತ್ರಗಳನ್ನು' ಮಾತ್ರ ವೀಕ್ಷಿಸಲಾಗುತ್ತಿತ್ತು ಎಂದು ನೀತಿ ಆಯೋಗದ ಸದಸ್ಯ ವಿಕೆ ಸಾರಸ್ವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ರಾಜಕಾರಣಿಗಳು ಕಾಶ್ಮೀರಕ್ಕೆ ಹೋಗಲಯ ಯಾಕೆ ಬಯಸುತ್ತಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಅವರು ಕಾಶ್ಮೀರದಲ್ಲಿ ಮರು ಸೃಷ್ಟಿಸಲು ಬಯಸುತ್ತಿದ್ದಾರೆ. ಅವರು ಬೆಂಕಿ ಹಚ್ಚಲು ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. ಕಾಶ್ಮೀರದಲ್ಲಿ ಇಂಟರ್ ನೆಟ್ ಇಲ್ಲದಿದ್ದರೆ ಏನಾಗುತ್ತದೆ?, ಅಲ್ಲಿ ಇಂಟರ್ ನೆಟ್ ನಲ್ಲಿ ನೀವು ಏನನ್ನು ನೋಡುತ್ತೀರಿ? ಅಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದು ಬಿಟ್ಟರೆ ಬೇರೇನೂ ಮಾಡುವುದಿಲ್ಲ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News