'ಅಶ್ಲೀಲ ಚಿತ್ರ ವೀಕ್ಷಣೆಗೆ ಇಂಟರ್ನೆಟ್ ಬಳಕೆ' ಹೇಳಿಕೆ: ಕಾಶ್ಮೀರಿಗಳ ಕ್ಷಮೆ ಯಾಚಿಸಿದ ನೀತಿ ಆಯೋಗದ ಸದಸ್ಯ

Update: 2020-01-19 13:23 GMT

ಹೊಸದಿಲ್ಲಿ: 'ಕಾಶ್ಮೀರದಲ್ಲಿ ಇಂಟರ್ ನೆಟ್ ಅನ್ನು ಅಶ್ಲೀಲ ಚಿತ್ರ ವೀಕ್ಷಿಸಲು ಬಳಸುತ್ತಿದ್ದರು' ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್  ಇದೀಗ ಭಾರೀ ಆಕ್ರೋಶದ ನಂತರ ಸ್ಪಷ್ಟನೆ ನೀಡಿ ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.

"ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಈ 'ತಪ್ಪಾದ' ಹೇಳಿಕೆಯಿಂದ ಕಾಶ್ಮೀರದ ಜನರ ಭಾವನೆಗಳಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತಿದ್ದೇನೆ. ಇಂಟರ್ ನೆಟ್ ಹೊಂದುವ ಕಾಶ್ಮೀರಿಗಳ ಹಕ್ಕಿನ ವಿರುದ್ಧ ನಾನಿದ್ದೇನೆ ಎನ್ನುವ ಭಾವನೆ ಅವರಿಗೆ ಬಾರದೆ ಇರಲಿ ಎಂದು ನಾನು ಇಚ್ಛಿಸುತ್ತೇನೆ" ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News