ಗ್ಯಾಸ್ ಸಿಲಿಂಡರ್ ರೀ ಫಿಲ್ಲಿಂಗ್, ಅಕ್ರಮ ಮಾರಾಟ ಆರೋಪ: ನಾಲ್ವರ ಸೆರೆ

Update: 2020-01-22 18:39 GMT

ಬೆಂಗಳೂರು, ಜ.22: ಗ್ಯಾಸ್ ಸಿಲಿಂಡರ್‌ಗಳನ್ನು ರೀ ಫಿಲ್ಲಿಂಗ್ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 222 ಸಿಲಿಂಡರ್‌ಗಳು ಹಾಗೂ ಆಟೊ ಜಪ್ತಿ ಮಾಡಿದ್ದಾರೆ.

ಆರ್‌ಟಿ ನಗರದ ಚೌಧರಿ(62), ಚಾಮುಂಡಿ ನಗರದ ರಫೀಕ್(35), ಕಿಶೋರ್(24), ಸೀತಪ್ಪಲೇಔಟ್‌ನ ಹರ್ಫತ್ ಬೇಗ್(31) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಎರಡೂವರೆ ಲಕ್ಷ ಮೌಲ್ಯದ ಭಾರತ್, ಇಂಡಿಯನ್, ಎಚ್‌ಪಿ ಹಾಗೂ ಟೋಟಲ್ ಗ್ಯಾಸ್ ಕಂಪೆನಿಗಳ 222 ಗೃಹ ಬಳಕೆಯ ಸಿಲಿಂಡರ್‌ಗಳು, ಆಟೋ ಹಾಗೂ ರೀ ಫಿಲ್ಲಿಂಗ್ ಮಾಡುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ರಾಮ್ ಕಿಶನ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಚಾಮುಂಡಿ ನಗರದ ಸೀತಪ್ಪಲೇಔಟ್‌ನ ಮನೆಯೊಂದನ್ನು ಬಾಡಿಗೆ ಪಡೆದು ಯಾರಿಗೂ ಗೊತ್ತಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ರೀ ಫಿಲ್ಲಿಂಗ್ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News