ಜ. 26ರಿಂದ ಮಹಾರಾಷ್ಟ್ರದ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣ

Update: 2020-01-23 03:36 GMT

ಮುಂಬೈ : ಗಣರಾಜ್ಯೋತ್ಸವ ದಿನವಾದ ಜನವರಿ 26ರಿಂದ ಮಹಾರಾಷ್ಟ್ರದ ಶಾಲೆಗಳ ವಿದ್ಯಾರ್ಥಿಗಳು ಬೆಳಗ್ಗಿನ ಸಭೆಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಕಡ್ಡಾಯವಾಗಿ ಓದಬೇಕು ಎಂದು ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಮಂಗಳವಾರ ಹೇಳಿದ್ದಾರೆ.

ಸಂವಿಧಾನದ ಪ್ರಸ್ತಾವನೆ ಓದುವುದು ಸಂವಿಧಾನದ ಸಾರ್ವಭೌಮತೆ, ಎಲ್ಲರ ಕಲ್ಯಾಣ ಅಭಿಯಾನದ ಒಂದು ಭಾಗವಾಗಿದೆ ಎಂದು ಮಹಾರಾಷ್ಟ್ರ ಸರಕಾರದ ಸುತ್ತೋಲೆ ಹೇಳಿದೆ.

ಶಾಲೆಯಲ್ಲಿ ಪ್ರತಿದಿನ ಬೆಳಗ್ಗಿನ ಪ್ರಾರ್ಥನೆ ಆದ ಬಳಿಕ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆ ಓದಬೇಕು. ಇದರಿಂದ ಅವರಿಗೆ ಸಂವಿಧಾನದ ಪ್ರಾಮುಖ್ಯತೆ ತಿಳಿಯುತ್ತದೆ. ಇದು ಹಿಂದಿನ ಸರಕಾರ ನಿರ್ಣಯ. ಆದರೆ, ನಾವು ಇದನ್ನು ಜನವರಿ 26ರಿಂದ ಅನುಷ್ಠಾನಗೊಳಿಸಲಿದ್ದೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್-ಎನ್‌ಸಿಪಿ ಅಧಿಕಾರದಲ್ಲಿ ಇರುವಾಗ ಇದಕ್ಕೆ ಸಂಬಂಧಿಸಿ 2013 ಫೆಬ್ರವರಿಯಲ್ಲಿ ನಿರ್ಣಯ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News