ಸಿಎಎ ಪರ ರ‍್ಯಾಲಿಯಲ್ಲಿ ಜಟಾಪಟಿ: ಹಲವು ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್

Update: 2020-01-23 11:10 GMT
Photo: Twitter

ಭೋಪಾಲ್: ರವಿವಾರ ಮಧ್ಯ ಪ್ರದೇಶದ ರಾಜಘರ್ ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಪರ ರ್ಯಾಲಿಯೊಂದರಲ್ಲಿ  ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆಯೆನ್ನಲಾಗಿದ್ದು ಈ ಸಂದರ್ಭ ಬಿಜೆಪಿ ಕಾರ್ಯಕರ್ತರಿಗೆ  ಕಪಾಳಮೋಕ್ಷಗೈದಿದ್ದರೆನ್ನಲಾದ  ಹಲವಾರು ಅಧಿಕಾರಿಗಳಿಗೆ ಅಲ್ಲಿನ ಹೈಕೋರ್ಟಿನ ಇಂದೋರ್ ಪೀಠ ನೋಟಿಸ್ ಜಾರಿಗೊಳಿಸಿದೆ.

ಘಟನೆಯ ವೀಡಿಯೋ ಕೂಡ ಹರಿದಾಡುತ್ತಿದ್ದು ರ್ಯಾಲಿಯಲ್ಲಿ ಎರಡು ಗುಂಪುಗಳ ನಡುವೆ ವಾಗ್ಯುದ್ಧ ನಡೆಯುತ್ತಿರುವುದು ಕಾಣಿಸುತ್ತದೆ. ವೀಡಿಯೋದಲ್ಲಿ  ಮಹಿಳಾ ಅಧಿಕಾರಿಯೊಬ್ಬರು ಬಿಜೆಪಿ ಕಾರ್ಯಕರ್ತನೆಂದು ತಿಳಿಯಲಾದ ವ್ಯಕ್ತಿಗೆ ಕಪಾಳಮೋಕ್ಷಗೈಯ್ಯುತ್ತಿರುವುದು ಕಾಣಿಸುತ್ತದೆ. ಪ್ರತಿಭಟನಾಕಾರರು  ಜಿಲ್ಲಾ ಕಲೆಕ್ಟರ್ ಮತ್ತಿತರ ಅಧಿಕಾರಿಗಳಿಗೂ ಹಲ್ಲೆಗೈದಿದ್ದಾರೆನ್ನಲಾಗಿದೆ.

ರವಿವಾರದ ರ್ಯಾಲಿಗೆ ಅನುಮತಿಯಿರಲಿಲ್ಲ ಎಂದು ಹೇಳಲಾಗಿದೆ. ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಿಎಎ ಬೆಂಬಲಿಗರು ರ್ಯಾಲಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News