ಬಿಬಿಎಂಪಿಯ ಹತ್ತು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅವಿರೋಧ ಆಯ್ಕೆ

Update: 2020-01-23 13:14 GMT

ಬೆಂಗಳೂರು, ಜ.23: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಲ್ಲಿ 10 ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಗುರುವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಬಿಬಿಎಂಪಿಯ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಎಂ. ಗೌತಮ್‌ ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಕಾರ್ಯ ನೆರವೇರಿಸಿದರು. ಒಟ್ಟು 12 ಸ್ಥಾಯಿ ಸಮಿತಿಗಳಲ್ಲಿ 10 ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ತೋಟಗಾರಿಕೆ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗಳಲ್ಲಿ ತಲಾ 10 ಸದಸ್ಯರಿದ್ದು, ಒಂದು ಸದಸ್ಯರ ಆಯ್ಕೆ ಬಾಕಿಯಿದೆ. ಹೀಗಾಗಿ 11 ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಉಳಿದೆರಡು ಸಮಿತಿಗಳ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಆಯ್ಕೆಯಾದ ಅಧ್ಯಕ್ಷರು: ಪ್ರತಿ ಸ್ಥಾಯಿ ಸಮಿತಿಯಲ್ಲಿ 11 ಸದಸ್ಯರು ಇರುತ್ತಾರೆ. ಅದರಲ್ಲಿ 6 ಜನ ಸದಸ್ಯರು ಹಾಜರಿದ್ದರೂ, ಅಧ್ಯಕ್ಷರ ಆಯ್ಕೆ ಮಾಡಬಹುದು. ಬಹುತೇಕ ಎಲ್ಲ ಸಮಿತಿಗಳಲ್ಲಿ 9 ಕ್ಕೂ ಹೆಚ್ಚು ಸದಸ್ಯರ ಹಾಜರಾತಿ ಖಚಿತಪಡಿಸಿಕೊಂಡ ಪ್ರಾದೇಶಿಕ ಆಯುಕ್ತರು ಚುನಾವಣೆ ಪ್ರಕ್ರಿಯೆಗೆ ಅನುಮತಿ ನೀಡಿದರು. ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಒಂದು ನಿಮಿಷ ಹಾಗೂ ನಾಮಪತ್ರ ಹಿಂಪಡೆಯಲು ಒಂದು ನಿಮಿಷ ಕಾಲಾವಕಾಶ ನೀಡಲಾಗಿತ್ತು. ಎಲ್ಲ 10 ಸಮಿತಿಗಳಿಂದಲೂ ತಲಾ ಒಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವರನ್ನೇ ಅವಿರೋಧವಾಗಿ ಅಧ್ಯಕ್ಷರೆಂದು ಘೋಷಿಸಲಾಯಿತು.

1. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ-ಅಧ್ಯಕ್ಷರು: ಎಲ್. ಶ್ರೀನಿವಾಸ್, ಸದಸ್ಯರು: ಮಹಾಲಕ್ಷ್ಮೀ ಎಚ್. ರವೀಂದ್ರ, ಎಂ. ಸತೀಶ್, ಬಿ.ಎನ್. ನಿತೀಶ್ ಪುರುಷೋತ್ತಮ, ಕೆ.ದೇವದಾಸ, ಭಾಗ್ಯಲಕ್ಷ್ಮೀ ಮುರಳಿ, ಎಸ್. ಉದಯ್ ಕುಮಾರ್, ಎಸ್. ಕೇಶವಮೂರ್ತಿ, ಆರ್. ವಸಂತಕುಮಾರ್, ಎಸ್. ಅನ್ಸರ್ ಪಾಷಾ, ಭದ್ರೇಗೌಡ.

2. ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ-ಅಧ್ಯಕ್ಷರು: ಜಿ. ಮಂಜುನಾಥ್ ರಾಜು. ಸದಸ್ಯರು: ಆರ್. ಪ್ರತಿಮ, ಎಂ.ಎನ್.ಶ್ರೀಕಾಂತ್, ಶಿಲ್ಪಾ ಶ್ರೀಧರ್, ಎಂ. ಪ್ರಮಿಳಾ, ಮಧುಕುಮಾರಿ ವಾಗೀಶ್, ಇರ್ಷಾದ್ ಬೇಗಂ, ಮೀನಾಕ್ಷಿ, ಆರ್. ರೂಪ, ಶಿಲ್ಪಾ ಅಭಿಲಾಷ್, ಶೋಭಾ ಜಗದೀಶ್‌ಗೌಡ.

3. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ-ಅಧ್ಯಕ್ಷರು: ಆಶಾ ಸುರೇಶ್. ಸದಸ್ಯರು: ಪಿ.ವಿ. ಮಂಜುನಾಥ(ಬಾಬು), ಎಸ್. ಆನಂದಕುಮಾರ್, ಟಿ. ರಾಮಚಂದ್ರ, ಎಂ. ಚಂದ್ರಪ್ಪ, ಡಿ.ಎಚ್. ಲಕ್ಷ್ಮೀ, ರಾಜಣ್ಣ, ಎಂ. ಶಶಿರೇಖಾ, ಮಮತಾ ಶರವಣ, ಭಾಗ್ಯಮ್ಮ ಕೃಷ್ಣಯ್ಯ, ಎನ್. ರಾಜಶೇಖರ್.

4. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಅಧ್ಯಕ್ಷರು: ಮೋಹನ್ ಕುಮಾರ್. ಸದಸ್ಯರು: ಎ.ಸಿ.ಹರಿಪ್ರಸಾದ್, ಡಿ.ಪ್ರಮೊದ್, ಚಂದ್ರಕಲಾ ಗಿರೀಶ್ ಲಕ್ಕಣ್ಣ, ಡಿ.ಜಿ. ತೇಜಸ್ವಿನಿ ಸೀತಾರಾಮಯ್ಯ, ಸಿ. ಪಲ್ಲವಿ, ಕುಮಾರಿ ಪಳನಿಕಾಂತ್, ಸಿ. ಸರಳ ಮಹೇಶ್‌ಬಾಬು, ಎಚ್.ಎ. ಕೆಂಪೇಗೌಡ, ವಿ. ಪಳನಿ ಅಮ್ಮಾಳ್, ಕೆ.ವಿ. ರಾಜೇಂದ್ರ ಕುಮಾರ್.

5. ವಾರ್ಡ್ ಮಟ್ಟದ ಸಾರ್ವಜನಿಕರ ಕಾಮಗಾರಿ ಸ್ಥಾಯಿ ಸಮಿತಿ-ಅಧ್ಯಕ್ಷರು: ಜಿ.ಕೆ.ವೆಂಕಟೇಶ್(ಎನ್‌ಟಿಆರ್), ಸದಸ್ಯರು: ಬಿ.ಎನ್. ಐಶ್ವರ್ಯ, ಎನ್. ಶಾಂತಕುಮಾರಿ, ನಳನಿ ಎಂ.ಮಂಜು, ಎಂ. ಮಹದೇವ, ಗುರುಮೂರ್ತಿ ರೆಡ್ಡಿ, ಎಂ. ಗಾಯಿತ್ರಿ, ಮಂಜುಳಾ ವಿಜಯ್ ಕುಮಾರ್, ರಾಧಮ್ಮ ವೆಂಕಟೇಶ್, ನೌಶೀರ್ ಅಹ್ಮದ್, ಸವಿತ ವಿ.ಕೃಷ್ಣ.

6. ಶಿಕ್ಷಣ ಸ್ಥಾಯಿ ಸಮಿತಿ -ಅಧ್ಯಕ್ಷರು: ಮಂಜುಳಾ ನಾರಾಯಣಸ್ವಾಮಿ. ಸದಸ್ಯರು: ಇಮ್ರಾನ್ ಪಾಷಾ, ಎಸ್. ಲಿಲಾ ಶಿವಕುಮಾರ್, ಹೇಮಲತಾ ಸತೀಶ್ ಶೇಟ್, ಎನ್. ಭವ್ಯ, ವಿ.ವಿ. ಸತ್ಯನಾರಾಯಣ, ಸರ್ವಮಂಗಳ, ಕೆ.ಎಂ. ಮಮತಾ, ಜಿ.ವಿ. ಶಶಿಕಲಾ, ಬಿ.ಎನ್. ಮಂಜುನಾಥ ರೆಡ್ಡಿ, ಶಾಂತಬಾಬು.

7. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಅಧ್ಯಕ್ಷರು: ಹನುಮಂತಯ್ಯ. ಸದಸ್ಯರು: ಆರ್.ವಿ. ಯುವರಾಜ್, ಆರ್.ಜೆ. ಲತಾಕುಮಾರ್ ರಾಥೋಡ್, ಎನ್. ಮಂಜುನಾಥ್, ಆನಂದ್ ಕುಮಾರ್, ಕೆ. ರಾಜೇಶ್ವರಿ ಚೋಳರಾಜ, ಸರಸ್ವತಮ್ಮ, ಡಿ.ಮುನಿಲಕ್ಷ್ಮಮ್ಮ, ಎ.ಕೋದಂಡರೆಡ್ಡಿ, ಪುಷ್ಪ ಮಂಜುನಾಥ್, ನಾಜೀಮ್ ಖಾನಮ್.

8. ಅಪೀಲುಗಳ ಸ್ಥಾಯಿ ಸಮಿತಿ- ಅಧ್ಯಕ್ಷರು: ಸಿ.ಆರ್.ಲಕ್ಷ್ಮೀನಾರಾಯಣ್ (ಗುಂಡಣ್ಣ). ಸದಸ್ಯರು: ಎಂ.ವೇಲುನಾಯಕರ್, ಎನ್. ಜಯಪಾಲ, ಕೆ.ವೀಣಾಕುಮಾರಿ, ವಾಣಿ ವಿ.ರಾವ್, ಅಜ್ಮಲ್ ಬೇಗ್, ಆರ್. ಸಂಪತ್ ರಾಜ್, ಅಬ್ದುಲ್ ರಕೀಬ್ ಝಾಕೀರ್, ಶಕೀಲ್ ಅಹಮದ್, ಬಿ. ಸುಮಂಗಲ, ಉಮೇಸಲ್ಮಾ.

9. ಮಾರುಕಟ್ಟೆ ಸ್ಥಾಯಿ ಸಮಿತಿ- ಅಧ್ಯಕ್ಷರು: ಎಂ.ಪದ್ಮಾವತಿ ಶ್ರೀನಿವಾಸ. ಸದಸ್ಯರು: ಎನ್.ನಾಗರಾಜು, ಜಿ.ಮಂಜುನಾಥ್, ಸೈಯ್ಯದ್ ಸಾಜೀದಾ, ವಿ.ವಿ. ಪಾತೀಬರಾಜನ್, ಉಮಾವತಿ ಪದ್ಮರಾಜ್, ಎಲ್. ದೀಪಿಕಾ ಮಂಜುನಾಥ ರೆಡ್ಡಿ, ಆರ್. ಪ್ರಭಾವತಿ ರಮೇಶ್, ಭಾರತಿ ರಾಮಚಂದ್ರ, ಕೆ.ಗಣೇಶ್‌ ರಾವ್ ಮಾನೆ, ಆರ್. ಪದ್ಮಾವತಿ ಅಮರನಾಥ್.

10. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ- ಅಧ್ಯಕ್ಷರು: ಅರುಣಾ ರವಿ. ಸದಸ್ಯರು: ಜಿ. ಪದ್ಮಾವತಿ, ಎಂ. ಶಿವರಾಜು, ಆರ್.ಎಸ್.ಸತ್ಯನಾರಾಯಣ, ಮೊಹಮ್ಮದ್ ರಿಜ್ವಾನ್ ನವಾಬ್, ಎಂ.ಬಿ.ದ್ವಾರಕನಾಥ್ (ದಾಲು), ದೀಪಾ ನಾಗೇಶ್, ಜಿ. ಇಂದಿರಾ, ಎಂ.ನಾಗರಾಜ, ಪ್ರತಿಭಾ ಧನರಾಜ್, ಗಂಗಮ್ಮ.

ನಾಲ್ಕು ಮಹಿಳಾ ಅಧ್ಯಕ್ಷರು

ಪಾಲಿಕೆಯ ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕ ಹಾಗೂ ಪ್ರಸ್ತುತ ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಗಳಲ್ಲಿ (10+3) ಕೇವಲ 4 ಮಹಿಳಾ ಸದಸ್ಯರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸ್ಥಾಯಿ ಸಮಿತಿಗೆ ಉಮಾದೇವಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಮಮತಾ ಅವರೇ ಸಂಭವನೀಯ ಅಧ್ಯಕ್ಷರು ಎಂದು ಬಿಂಬಿಸಲಾಗುತ್ತಿದೆ.

ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಲೆಕ್ಕಪತ್ರ ಮತ್ತು ತೋಟಗಾರಿಕಾ ಸ್ಥಾಯಿ ಸಮಿತಿಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಿದ್ದು, ಎರಡೂ ಸಮಿತಿಗಳ ಚುನಾವಣೆ ಮುಂದೂಡಲಾಗಿದೆ. ನಿಯಮಾನುಸಾರ ಚುನಾವಣಾ ಪ್ರಕ್ರಿಯೆ ನಡೆದ ಬಳಿಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು.

-ಎಂ. ಗೌತಮ್‌ ಕುಮಾರ್, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News