ಸೌದಿ ಯುವರಾಜನ ಫೋನ್‌ನಿಂದ ಬಂದ ಸಂದೇಶದಲ್ಲಿ ಇತ್ತು ವೈರಸ್!

Update: 2020-01-23 14:17 GMT
ಫೈಲ್ ಚಿತ್ರ

ವಾಶಿಂಗ್ಟನ್, ಜ. 23: ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಫೋನ್‌ನಿಂದ ಕಳುಹಿಸಲಾದ ಸಂದೇಶವೊಂದರಲ್ಲಿ ಅಡಗಿಸಿಡಲಾಗಿದ್ದ ಬೇಹು ಸಾಫ್ಟ್‌ವೇರ್ ಜೆಫ್ ಬೆಝೋಸ್ ‌ರ ಐಫೋನ್‌ಗೆ ಕನ್ನ ಹಾಕಿರುವ ಸಾಧ್ಯತೆಯಿದೆ ಎಂದು ಪರಿಣತರು ಹೇಳುತ್ತಾರೆ.

ಸೌದಿ ಯುವರಾಜನ ಆಪ್ತ ಸಹಾಯಕನೊಬ್ಬ ಪಡೆದುಕೊಂಡಿದ್ದ ‘ಟೂಲ್’ಗಳು ಬೆಝೋಸ್ ‌ರ ಫೋನನ್ನು ವೈರಸ್ ಸೊಂಕಿಗೆ ಗುರಿಪಡಿಸಿವೆ ಎನ್ನುವುದು ಬೆಝೋಸ್ ನೇಮಿಸಿದ ತಾಂತ್ರಿಕ ಪರಿಣತರ ವಿಶ್ಲೇಷಣೆಯಲ್ಲಿ ಬಯಲಾಗಿದೆ. 2019ರ ಆರಂಭದಲ್ಲಿ ತನ್ನ ಖಾಸಗಿ ಮಾಹಿತಿಗಳು ಸೋರಿಕೆಯಾದ ಬಳಿಕ ಅವರು ತನಿಖೆಗೆ ತಂತ್ರಜ್ಞರನ್ನು ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News