ಜ.26ರಂದು ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ: ಮೌಲಾನ ಅಬ್ದುರ್ರಹೀಮ್

Update: 2020-01-23 19:20 GMT

ಬೆಂಗಳೂರು, ಜ.23: ಸರ್ವ ಧರ್ಮೀಯ ಮುಖಂಡರೊಂದಿಗೆ ಜ.26ರಂದು ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಗರದ ಮಿಲ್ಲರ್ಸ್‌ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಜಮೀಯತ್ ಉಲಮಾ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವೌಲಾನ ಅಬ್ದುರ್ರಹೀಮ್ ತಿಳಿಸಿದರು.

ಗುರುವಾರ ಶಿವಾಜಿನಗರದಲ್ಲಿರುವ ಜಮೀಯತ್ ಉಲಮಾ ಸಂಘಟನೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯತ್ ಉಲಮಾ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಸಯ್ಯದ್ ಅರ್ಶದ್ ಮದನಿ ವಹಿಸಲಿದ್ದು, ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಅಮೀರೆ ಶರೀಅತ್ ವೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮಿ, ಜಮೀಯತ್ ಉಲಮಾ ಆಂಧ್ರಪ್ರದೇಶದ ಉಪಾಧ್ಯಕ್ಷ ಮುಫ್ತಿ ಸಯ್ಯದ್ ಮಾಸೂಮ್ ಸಾಖಿಬ್, ತಮಿಳುನಾಡಿನ ಅಧ್ಯಕ್ಷ ಮುಫ್ತಿ ಸಬೀಲ್ ಅಹ್ಮದ್, ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಚಾಡೋ, ಗುರುಸಿಂಗ್ ಸಭಾದ ಕಾರ್ಯದರ್ಶಿ ಎಚ್.ಎಸ್.ಭಾಟಿಯಾ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಮೀಯತ್ ಉಲಮಾ ಕರ್ನಾಟಕ ಸಂಘಟನೆಯ ಮುಖಂಡರಾದ ಮೌಲಾನ ಮುಹಮ್ಮದ್ ಸಲಾಹುದ್ದೀನ್, ಮೌಲಾನ ಅಮೀನ್, ಫಾಝಿಲ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News