ಇಂದು ಚುನಾವಣೆ ನಡೆದಿದ್ದರೆ ಬಿಜೆಪಿ ಎಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು ಗೊತ್ತೇ ?

Update: 2020-01-24 17:04 GMT

ಹೊಸದಿಲ್ಲಿ: ಲೋಕಸಭಾ ಚುನಾವಣೆ ಇಂದು ನಡೆದಿದ್ದರೆ ಬಿಜೆಪಿ 32 ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು ಎನ್ನುವ ಅಂಶ ಮೂಡ್ ಆಫ್ ದ ನೇಷನ್ (ಎಂಒಟಿಎನ್) ಸಮೀಕ್ಷೆಯಿಂದ ಬಹಿರಂಗವಾಗಿದೆ.

2019ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು. ಇಂಡಿಯಾ ಟುಡೇ ಸಮೂಹ- ಕಾರ್ವಿ ಇನ್‌ಸೈಟ್ಸ್ ಎಂಒಟಿಎನ್ ಸಮೀಕ್ಷೆಯ ಪ್ರಕಾರ, ಚುನಾವಣೆ ಇಂದು ನಡೆದಿದ್ದರೆ ಬಿಜೆಪಿ ಕೇವಲ 271 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗುತ್ತಿತ್ತು ಹಾಗೂ ಈ ಮೂಲಕ ಬಿಜೆಪಿಗೆ ಸರಳ ಬಹುಮತ ಪಡೆಯಲು ಒಂದು ಸ್ಥಾನದ ಕೊರತೆ ಉಂಟಾಗುತ್ತಿತ್ತು.

ಕಾಂಗ್ರೆಸ್ ಪಕ್ಷಕ್ಕೆ ಎಂಟು ಸ್ಥಾನ ಲಾಭವಾಗುತ್ತಿತ್ತು. ಶಿವಸೇನೆ ಎನ್‌ಡಿಎ ಮೈತ್ರಿಕೂಟದಿಂದ ಹೊರ ನಡೆದಿರುವುದು ಹಾಗೂ ನಾಗರಿಕ ಅರಾಜಕತೆಯ ಕಾರಣದಿಂದಾಗಿ ಎನ್‌ಡಿಎ ಮೈತ್ರಿಕೂಟ ಒಟ್ಟು 50 ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು ಎಂದು ಸಮೀಕ್ಷೆ ಹೇಳಿದೆ. ಇಷ್ಟಾಗಿಯೂ ಎನ್‌ಡಿಎ ಕೂಟಕ್ಕೆ 303 ಸ್ಥಾನಗಳು ಲಭಿಸಿ ಸ್ಪಷ್ಟ ಬಹುಮತ ದೊರಕುತ್ತಿತ್ತು ಎಂದು ಅಂದಾಜಿಸಿದೆ. ಯುಪಿಎಗೆ ಒಟ್ಟಾಗಿ 15 ಸ್ಥಾನ ಲಾಭವಾಗುತ್ತಿತ್ತು.

ಎನ್‌ಡಿಎಗೆ 4% ಮತ ನಷ್ಟವಾದರೆ, ಯುಪಿಎ ಮತ ಗಳಿಕೆ 2% ಹೆಚ್ಚುತ್ತಿತ್ತು ಎಂದು ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News