ಪಾಕಿಸ್ತಾನದಲ್ಲಿ ಅಪಹರಣಗೊಂಡ ಹಿಂದೂ ಬಾಲಕಿ ಸುರಕ್ಷಾ ಕೇಂದ್ರಕ್ಕೆ

Update: 2020-01-24 14:00 GMT

ಕರಾಚಿ (ಪಾಕಿಸ್ತಾನ), ಜ. 24: ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಬಲವಂತದಿಂದ ಇಸ್ಲಾಮ್‌ಗೆ ಮತಾಂತರಗೊಂಡು ಮುಸ್ಲಿಮ್ ವ್ಯಕ್ತಿಯೊಬ್ಬನನ್ನು ವಿವಾಹವಾದರೆನ್ನಲಾದ 15 ವರ್ಷದ ಹಿಂದೂ ಬಾಲಕಿಯೊಬ್ಬರನ್ನು ನ್ಯಾಯಾಲಯದ ಆದೇಶದಂತೆ ಮಹಿಳಾ ಸುರಕ್ಷತಾ ಕೇಂದ್ರವೊಂದಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಮೇಹಕ್ ಕುಮಾರಿಯನ್ನು ಅಲಿ ರಝ ಸೋಳಂಗಿ ಎಂಬ ವ್ಯಕ್ತಿಯು ಜನವರಿ 15ರಂದು ಜಕೋಬಾಬಾದ್ ಜಿಲ್ಲೆಯಿಂದ ಅಪಹರಿಸಿ, ಬಳಿಕ ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿಯ ತಂದೆ ವಿಜಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗಳನ್ನು ಸೋಳಂಗಿಯು ಅಪಹರಿಸಿ ಬಲವಂತದಿಂದ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದರು. ಅವಳನ್ನು ಅಪಹರಿಸುವಾಗ ಆಕೆಗೆ 15 ವರ್ಷ ಎಂದು ಅವರು ಹೇಳಿದ್ದಾರೆ.

ಮೇಹಕ್ ಮತ್ತು ಸೋಳಂಗಿಯನ್ನು ಮಂಗಳವಾರ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿಂದ ಬಾಲಕಿಯನ್ನು ಮಹಿಳಾ ಪೊಲೀಸ್ ಸುರಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ನ್ಯಾಯಾಲಯದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News