ವಿಪರೀತ ತೆರಿಗೆ ಸಾಮಾಜಿಕ ಅನ್ಯಾಯ; ಸಿಜೆಐ ಎಸ್.ಎ. ಬೊಬ್ಡೆ

Update: 2020-01-24 15:47 GMT

ಹೊಸದಿಲ್ಲಿ,ಜ.22: ನಾಗರಿಕರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆಗೊಳಿಸಲು ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಕೇಂದ್ರ ಸರಕಾರವನ್ನು ಕೋರಿದ್ದಾರೆ.ಕೇಂದ್ರ ಬಜೆಟ್ ಮಂಡನೆಗೆ ಕೇವಲ ಒಂದು ವಾರ ಉಳಿದಿರುವ ಸಂದರ್ಭದಲ್ಲೇ ಎಸ್.ಎ. ಬೊಬ್ಡೆ ಈ ಮನವಿ ಮಾಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ತೆರಿಗೆಕಳ್ಳತನದ ಹಾಗೆಯೇ ವಿಪರೀತ ತೆರಿಗೆ ವಿಧಿಸುವಿಕೆ ಕೂಡಾ ಜನತೆಗೆ ಮಾಡುವ ಸಾಮಾಜಿಕ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

      ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದ 79ನೇ ಸಂಸ್ಥಾಪನಾ ಕಾರ್ಯಕ್ರಮದ ಪ್ರಯುಕ್ತ ಹೊಸದಿಲ್ಲಿಯಲ್ಲಿ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು‘‘ವಿಪರೀತ ತೆರಿಗೆ ವಿಧಿಸುವಿಕೆ’ಯು ಸರಕಾರವು ನಾಗರಿಕರಿಗೆ ಮಾಡುವ ಸಾಮಾಜಿಕ ಅನ್ಯಾಯವಾಗಿದೆಯೆಂದು ಅಭಿಪ್ರಾಯಿಸಿದರು. ತೆರಿಗೆ ವಿಧಿಸುವಿಕೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಕ್ಷಿಪ್ರವಾಗಿ ಬಗೆಹರಿಸುವಲ್ಲಿ ಆದಾಯ ತೆರಿಗ ನ್ಯಾಯಾಧೀಕರಣದ ಪಾತ್ರವನ್ನು ಸಿಜೆಐ ಬೊಬ್ಡೆ ಪ್ರಶಂಸಿಸಿದರು.

ತೆರಿಗೆ ನ್ಯಾಯಾಧೀಕರಣವು ದೇಶದಲ್ಲಿ ಸಂಪನ್ಮೂಲಗಳ ಕ್ರೋಢೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನ್ಯಾಯಯುತವಾದ ಹಾಗೂ ತ್ವರಿತವಾಗಿ ತೆರಿಗೆ ಸಂಬಂಧಿ ವ್ಯಾಜ್ಯಗಳನ್ನು ಬಗೆಹರಿಸುವುದರಿಂದ ತೆರಿಗೆ ಪಾವತಿದಾರನಿಗೆ ತೆರಿಗೆ ಪಾವತಿಸಲು ಉತ್ತೇಜನ ದೊರೆಯುತ್ತದೆ ಎಂದು ಬೊಬ್ಡೆ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News