ಸಾರ್ವಜನಿಕ ಶಿಕ್ಷಣಕ್ಕೆ ಸರಕಾರ ಅನುದಾನ ನೀಡಲೇಬೇಕು: ಹೈಕೋರ್ಟ್

Update: 2020-01-24 17:08 GMT

ಹೊಸದಿಲ್ಲಿ, ಜ.24: ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿಗಳಿಗೆ ಚಳಿಗಾಲದ ಸೆಮಿಸ್ಟರ್ ಶುಲ್ಕವನ್ನು ಹಳೆಯ ಹಾಸ್ಟೆಲ್ ಕೈಪಿಡಿಯ ಆಧಾರದಲ್ಲೇ ಪಾವತಿಸಲು ದಿಲ್ಲಿ ಹೈಕೋರ್ಟ್ ಅವಕಾಶ ನೀಡಿದೆ. ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಷೆ ಘೋಷ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅವಕಾಶ ನೀಡಿದೆ. ಕಳೆದ ವರ್ಷ ಶುಲ್ಕ ಏರಿಸಿ ಜೆಎನ್‌ಯು ಆಡಳಿತ ಹೊರಡಿಸಿದ ಅಧಿಸೂಚನೆ ವಿರುದ್ಧ ವಿದ್ಯಾರ್ಥಿಗಳ ಯೂನಿಯನ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಸರಕಾರ ಸಾರ್ವಜನಿಕ ಶಿಕ್ಷಣಕ್ಕೆ ಅನುದಾನ ನೀಡಲೇ ಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

ನಿಗದಿತ ಅವಧಿ ಮುಗಿದ ಬಳಿಕ, ತಡವಾಗಿ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳ ಮೇಲೆ ಯಾವುದೇ ದಂಡ ವಿಧಿಸಬಾರದು ಎಂದು ಸೂಚಿಸಿರುವ ಹೈಕೋರ್ಟ್, ಈ ಬಗ್ಗೆ 2 ವಾರದೊಳಗೆ ಪ್ರತಿಕ್ರಿಯಿಸುವಂತೆ ಯುಜಿಸಿ ಮತ್ತು ಮಾನವ ಸಂಪನ್ಮೂಲ ಇಲಾಖೆಗೆ ಸೂಚಿಸಿದೆ. ಶೇ.90ರಷ್ಟು ವಿದ್ಯಾರ್ಥಿಗಳು ಹೆಚ್ಚಿಸಿದ ಶುಲ್ಕವನ್ನೇ ಪಾವತಿಸಿದ್ದು ಉಳಿದ 10% ವಿದ್ಯಾರ್ಥಿಗಳಿಗೆ ಹಳೆಯ ಶುಲ್ಕ ಪಾವತಿಸಲು ಅವಕಾಶ ನೀಡುವುದು ಸರಿಯಲ್ಲ ಆದ್ದರಿಂದ ವಿದ್ಯಾರ್ಥಿ ಯೂನಿಯನ್‌ನ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು ಪಾವತಿಸಿದವರು ಪಾವತಿಸಿ ಆಗಿದೆ. ಉಳಿದ 10% ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಂದ ಬರಬೇಕಿರುವ ಹೆಚ್ಚುವರಿ ಹಣಕ್ಕೆ ನೀವು ವ್ಯವಸ್ಥೆ ಮಾಡಬೃಏಕು. ಈಗ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಎಂದು ನ್ಯಾಯಾಲಯ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News