ಭಾರತ ಚುನಾವಣಾ ಆಯೋಗದ ರಾಷ್ಟ್ರಮಟ್ಟದ ಪ್ರಶಸ್ತಿಗೆ ವಿ.ರಾಘವೇಂದ್ರ ಭಾಜನ

Update: 2020-01-24 18:49 GMT

ಬೆಂಗಳೂರು, ಜ.24: ಪ್ರತಿ ವರ್ಷ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಭಾರತ ಚುನಾವಣಾ ಆಯೋಗವು ಚುನಾವಣಾ ಮತ್ತು ಮತದಾರರ ಪಟ್ಟಿ ನಿರ್ವಹಣೆ ಮತ್ತು ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ಸಂಸ್ಥೆಗಳಿಗೆ ರಾಷ್ಟ್ರೀಯ ಅತ್ಯುತ್ತಮ ಚುನಾವಣಾ ಕಾರ್ಯಗಳ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ. ಭಾರತ ಚುನಾವಣಾ ಆಯೋಗವು 2019ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಿದ್ದು, ಕರ್ನಾಟಕದ ಈ ಕೆಳಗಿನ ಅಧಿಕಾರಿ ಹಾಗೂ ಸಂಸ್ಥೆಗೆ ಅತ್ಯುತ್ತಮ ಸಾಧನೆಗಾಗಿ 2019ರ ವಿಶೇಷ ಪ್ರಶಸ್ತಿ ಹಾಗೂ ಮಾಧ್ಯಮ ಪ್ರಶಸ್ತಿಯನ್ನು ಘೋಷಿಸಿದೆ.

ಇವಿಎಂ ನಿರ್ವಹಣೆಗಾಗಿ ವಿಶೇಷ ಪ್ರಶಸ್ತಿ-ವಿ.ರಾಘವೇಂದ್ರ, ಜಂಟಿ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ. ಮತದಾನ ಜಾಗೃತಿಗಾಗಿ ಮಾಧ್ಯಮ ಪ್ರಶಸ್ತಿ- ರೆಡ್ ಎಫ್‌ಎಂ, ಬೆಂಗಳೂರು ಇವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ. ಭಾರತ ಚುನಾವಣಾ ಆಯೋಗವು ಪ್ರಸ್ತುತ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಜ.25ರಂದು ಹೊಸದಿಲ್ಲಿಯ ಕಂಟೋನ್ಮೆಂಟ್‌ನಲ್ಲಿರುವ ರೆರಾವರ್ ಸಮಾರಂಭ 2020 ರ ಜನವರಿ 25 ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನದ ರಾಷ್ಟ್ರೀಯ ಸಮಾರಂಭದಲ್ಲಿ ಮೇಲಿನ ಅಧಿಕಾರಿ ಹಾಗೂ ಸಂಸ್ಥೆಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News