ಸಂವಿಧಾನ ಇರುವಾಗ ನಮ್ಮನ್ನು ಇಬ್ಭಾಗಿಸಲು ಸಾಧ್ಯವಿಲ್ಲ: ಡಾ.ಬಂಜಗೆರೆ ಜಯಪ್ರಕಾಶ್

Update: 2020-01-26 13:53 GMT

ಬೆಂಗಳೂರು, ಜ.26: ಬಿಜೆಪಿ ನೇತತ್ವದ ಎನ್‌ಡಿಎ ಸರಕಾರ, ಆರೆಸ್ಸೆಸ್‌ನವರು ದಶ್ಯ ಮಾಧ್ಯಮಗಳ ಮೂಲಕ  ದೇಶ ಇಬ್ಭಾಗ ಮಾಡುವಂತಹ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗಳನ್ನು ಜಾರಿಗೆ ತರಲು ಯತ್ನಿಸಿದರೂ ಕೊನೆಯದಾಗಿ ನಮ್ಮೆಲ್ಲರನ್ನೂ ಒಗ್ಗೂಡಿಸಿರುವ ಸಂವಿಧಾನವೇ ಗೆಲ್ಲುತ್ತದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.  

ರವಿವಾರ ಪುರ ಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ಜನವರಿ 26 ಸಂವಿಧಾನ ಜಾರಿ ದಿನದ ಅಂಗವಾಗಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಜನ ಜಾಗತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಹುಟ್ಟಿನಿಂದಲೇ ಭಾರತಿಯರಾಗಿದ್ದು, 70 ವರ್ಷದ ಹಿಂದಿನ ದಾಖಲೆಗಳನ್ನು ನೀಡಿ ಎಂದರೆ ನಾವು ಎಲ್ಲಿಂದ ನೀಡುವುದು. ನಮ್ಮ ಸಂಬಂಧಿಕರು, ನಮ್ಮ  ನೆರೆ ಹೊರೆಯವರನ್ನು ಕೇಳಿದರೆ ಅವರೇ ನಮ್ಮ ಬಗ್ಗೆ ನಾವು ಎಷ್ಟು ವರ್ಷಗಳಿಂದ ಇಲ್ಲಿ ಇದ್ದೇವೆ ಎನ್ನುವುದನ್ನು ಹೇಳುತ್ತಾರೆ. ಪ್ರಧಾನಿ ಮೋದಿ ಹಾಗೂ ಸಮಿತ್ ಶಾ ಅವರು ಸಿಎಎ ಮೂಲಕ ದೇಶ ಹಾಗೂ ಜನರ ಭಾವನೆಗಳನ್ನು ಇಬ್ಭಾಗ ಮಾಡಲು ಹೊರಟ್ಟಿದ್ದು, ನಾವೆಲ್ಲರೂ  ಇಂತಹ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ. ನಮ್ಮ ಸಂವಿಧಾನವೆ ನಮ್ಮ ಶಕ್ತಿ ಎಂದು ಹೇಳಿದರು.

ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ನಿರುದ್ಯೋಗ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸಮಸ್ಯೆಗಳನ್ನು ಬಗೆ ಹರಿಸುವತ್ತ ಗಮನ ಕೊಡಬೇಕು. ಆದರೆ, ಬಿಜೆಪಿ ಅವರು ಜನರ ಚಿಂತನೆಗಳನ್ನು ಬೇರೆ ಕಡೆಗೆ  ಸೆಳೆಯಲು ನೋಟು ಅಮಾನ್ಯೀಕರಣ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗಳನ್ನು  ಜಾರಿಗೆ ತರುತ್ತೇವೆ ಎನ್ನುವ ಮೂಲಕ ಸಹೋದರತ್ವದಿಂದ ಬಾಳುತ್ತಿರುವ ನಮ್ಮಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಮುಖಂಡ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ದೇಶದಲ್ಲಿ ಲಿಂಗ ಬೇಧ, ವರ್ಣ ಬೇಧ, ಜಾತಿ ಭೇದಗಳು ನಡೆಯುತ್ತಿದ್ದು, ಇಂತಹ ಅನಿಷ್ಟ ಪದ್ಧತಿಗಳನ್ನು ಹೊಡದೊಡಿಸಬೇಕಾಗಿದೆ. ಅಲ್ಲದೆ, ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ನಮ್ಮದೆ ರಾಜ್ಯದ ಕೂಲಿ ಕಾರ್ಮಿಕರನ್ನು ಬಾಂಗ್ಲಾ ದೇಶದವರೆಂದು ಅವರ ಗುಡಿಸಲುಗಳನ್ನು ಕಿತ್ತು ಹಾಕಿದರು. ಆದರೆ, ಸರಕಾರ ಇಂತಹ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ದೇಶದ ಸಂವಿಧಾನ 10 ಬಾರಿ ತಿದ್ದುಪಡಿ ಆಗಿದೆ. ಆದರೆ,  ಒಂದು ಬಾರಿಯೂ ಧರ್ಮ ಆಧಾರಿತ ಸಂವಿಧಾನ ತಿದ್ದುಪಡಿ ಆಗಿಲ್ಲ. ಈಗ ಅಂತಹ ಕಾಯ್ದೆಯನ್ನು ಜಾರಿಗೊಳಿಸಿದ್ದು, ಹಿಂದು ರಾಷ್ಟ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.    

ಪುಸ್ತಕ ಬಿಡುಗಡೆ: ಡಾ.ಕೆ.ಎ.ಓಬಳೇಶ್‌ರವರು ರಚಿಸಿರುವ ಸಂವಿಧಾನ ಮತ್ತು ಸಮಕಾಲೀನ ಬಿಕ್ಕಟ್ಟುಗಳು, ಎಸ್.ಡಿ.ರಾಯಮನೆ ರಚಿಸಿರುವ ಕಾಯಕ ಯೊಗಿ ಮಹಾಶರಣ ಅಪ್ಪ ಹರಳಯ್ಯ ಕತಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಂತಕಿ ಡಾ.ಕೆ.ಷರೀಫಾ, ಆರ್‌ಪಿಐರ್ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್‌ರಾಜ್,  ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಹೈಕೋಟ್ ವಕೀಲ ಕ್ಲಿಪ್ಟನ್ ರೋಜಾರಿಯೊ, ಬರಹಗಾರ ಡಾ.ಕೆ.ಎ.ಓಬಳೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News