ಸಿಎಎ ವಿರುದ್ಧ ಕೇರಳದಲ್ಲಿ 620 ಕಿ.ಮೀ. ಉದ್ದದ ಮಾನವ ಸರಪಳಿ: ಎಲ್ಲಾ ಧರ್ಮಗಳ ಲಕ್ಷಾಂತರ ಮಂದಿ ಭಾಗಿ

Update: 2020-01-26 14:20 GMT

ತಿರುವನಂತಪುರಂ: ಪೌರತ್ವ ಕಾಯ್ದೆಯ ವಿರುದ್ಧ ಕೇರಳದ ದಕ್ಷಿಣ ಭಾಗದಿಂದ ಉತ್ತರದವರೆಗೆ 620 ಕಿ.ಮೀ. ಉದ್ದದ ಮಾನವ ಸರಪಣಿಯನ್ನು ರಚಿಸಲಾಯಿತು. ಎಲ್ ಡಿಎಫ್ ಆಯೋಜಿಸಿದ್ದ ಈ ಮಾನವ ಸರಪಳಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದರು.

ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಿಪಿಐ ನಾಯಕ ಕಣಂ ರಾಜೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸುಮಾರು 60ರಿಂದ 70 ಲಕ್ಷ ಜನರು ಭಾಗವಹಿಸಿದ್ದರು ಎಂದು ಎಲ್ ಡಿಎಫ್ ಹೇಳಿದೆ. ಕಾಸರಗೋಡಿನಿಂದ ಕಳಿಯಕ್ಕವಿಳೈವರೆಗೆ ಮಾನವ ಸರಪಳಿ ರಚಿಸಲಾಯಿತು. ಮಾನವ ಸರಪಳಿಯಲ್ಲಿ ನವವಿವಾಹಿತರು, ವಿಕಲಚೇತನರು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಎಲ್ಲಾ ಧರ್ಮಗಳ ಲಕ್ಷಾಂತರ ಜನರು ಭಾಗಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News