ವೂಹಾನ್‌ನಿಂದ ಎಲ್ಲಾ ಜಪಾನ್ ಪ್ರಜೆಗಳ ತೆರವಿಗೆ ಕ್ರಮ: ಶಿಂಜೊ ಅಬೆ

Update: 2020-01-26 16:35 GMT

ಟೋಕಿಯೊ,ಜ.26: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹಾವಳಿಯಿಂದ ತತ್ತರಿಸಿರುವ ಚೀನಾದ ವುಹಾನ್ ನಗರದಿಂದ ತನ್ನ ಎಲ್ಲಾ ಪ್ರಜೆ ಗಳನ್ನು ಜಪಾನ್ ತೆರವುಗೊಳಿಸಲಿದೆಎಂದು ಪ್ರಧಾನಿ ಶಿಂಜೊ ಅಬೆ ರವಿವಾರ ತಿಳಿಸಿದ್ದಾರೆ.

 ವುಹಾನ್ ನಗರದಲ್ಲಿ ನೆಲೆಸಿರುವ ಜಪಾನಿ ಪ್ರಜೆಗಳು ಇಚ್ಛಿಸಿದಲ್ಲಿ ಅವರೆಲ್ಲರನ್ನು ವಿಶೇಷ ವಿಮಾನ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳಲಿದೆಯೆಂದು ಅಬೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜಪಾನಿ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರವಾಗಿ ಚೀನಿ ಸರಕಾರದ ಜೊತೆ ವಿವಿಧ ಹಂತಗಳಲ್ಲಿ ನಾವು ಸಮನ್ವಯತೆಯನ್ನು ಸಾಧಿಸಿದ್ದೇವೆ ಎಂದು ಅಬೆ ತಿಳಿಸಿದ್ದಾರೆ.

ಹುಬೆ ಪ್ರಾಂತದ ರಾಜಧಾನಿಯಾದ ವುಹಾನ್‌ನಲ್ಲಿ 430 ಜಪಾನಿ ಪ್ರಜೆಗಳಿ ದ್ದಾರೆಂದು ಜಪಾನ್ ವಿದೇಶಾಂಗ ಇಲಾಖೆಯು ತಿಳಿಸಿದೆ. ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳು ಈಗಾಗಲೇ ತಮ್ಮ ಉದ್ಯೋಗಿಗಳನ್ನು ಹಾಗೂ ಪೌರರನ್ನು ತೆರವುಗೊಳಿಸಲು ಏರ್ಪಾಡುಗಳನ್ನು ಮಾಡುತ್ತಿರುವಂತೆಯೇ ಜಪಾನ್ ಕೂಡಾ ಈ ಹೆಜ್ಜೆಯನ್ನಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News