5 ಮಂದಿ ಸೋಂಕು ದೃಢ: ತುರ್ತುಸ್ಥಿತಿ ಘೋಷಣೆ

Update: 2020-01-26 16:45 GMT

 ಹಾಂಕಾಂಗ್,ಜ.26: ಕೊರೊನಾ ವೈರಸ್ ಹಾಂಕಾಂಗ್ ನಗರಕ್ಕೂ ತನ್ನ ಕರಾಳ ಹಸ್ತವನ್ನು ಚಾಚಿದೆ. ಹಾಂಕಾಂಗ್‌ನಲ್ಲಿ ಈವರೆಗೆ 5 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಹಾಂಕಾಂಗ್ ನಗರದ ಮುಖ್ಯಸ್ಥೆ ಕ್ಯಾರಿ ಲ್ಯಾಮ್ ನಗರದಲ್ಲಿ ತುರ್ತುಸ್ಥಿತಿ ಘೋಷಿಸಿದ್ದು, ಶಾಲೆಗಳನ್ನು ಫೆಬ್ರವರಿ 17ರವರೆಗೆ ಮುಚ್ಚುಗಡೆಗೊಳಿಸುವಂತೆ ಆದೇಶಿಸಿದ್ದಾರೆ.

ಹಾವಳಿಯ ಹಿನ್ನೆಲೆಯಲ್ಲಿ ಹಾಂಕಾಂಗ್‌ನ ಡಿಸ್ನಿಲ್ಯಾಂಡ್ ಮನರಂಜನಾ ಪಾರ್ಕ್ ಅನಿ ರ್ದಿಷ್ಟಾವಧಿಯವರೆಗೆ ಮುಚ್ಚುಗಡೆಯನ್ನು ಘೋಷಿಸಿದೆ.

  ಕೊರೊನಾ ವೈರಸ್ ಹಾಂಕಾಂಗ್‌ನಲ್ಲಿಯೂ ಹರಡುವ ಭೀತಿಯಿರುವುದರಿಂದ ನಮ್ಮ ಅತಿಥಿಗಳು ಹಾಗೂ ಸಿಬ್ಬಂದಿಯ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ತಾನು ಈ ಕ್ರಮವನ್ನು ಕೈಗೊಂಡಿರುವುದಾಗಿ ತಿಳಿಸಿದೆ.

 ಹಾಂಕಾಂಗ್‌ನ ಡಿಸ್ನಿಲ್ಯಾಂಡ್ ಮನರಂಜನಾ ಪಾರ್ಕ್‌ನ ಪ್ರತಿಸ್ಪರ್ಧಿಯಾದ ಒಸಿಯನ್ ಪಾರ್ಕ್ ಕೂಡಾ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹಾಂಕಾಂಗ್‌ನಲ್ಲಿ ತುರ್ತುಸ್ಥಿತಿಯನ್ನು ಘೋಷಿಸಲಾಗಿದ್ದು, ಈ ಸೋಂಕು ರೋಗವು ಹರಡುವ ಅಪಾಯವನ್ನು ತಡೆಯಲು ಹಲವಾರು ಕ್ರಮಗಳನ್ನು ಪ್ರಕಟಿಸಿದೆ.

ಸೋಂಕುರೋಗ ಕಾಣಿಸಿಕೊಂಡಿರುವ ಚೀನಾ ಮುಖ್ಯಭೂಮಿಯಿಂದ ಹಾಂಕಾಂಗ್‌ಗೆ ಆಗಮಿಸುವವರನ್ನು ತಡೆಯುವಲ್ಲಿ ಇಲ್ಲವೇ ಅವರ ಸಂಖ್ಯೆಯನ್ನು ಕಡಿಮೆಗೊಳಿಸುವಲ್ಲಿ ವಿಫಲರಾಗಿರುವುದಕ್ಕಾಗಿ ಹಾಂಕಾಂಗ್ ನಾಯಕಿ ತೀವ್ರ ಟೀಕೆಗೆ ಒಳಗಾಗಿರುವ ಮಧ್ಯೆಯೇ ಈ ಬೆಳವಣಿಗೆಯುಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News