ಸಮಪರ್ಕ ಕಾನೂನು ಜಾರಿಗೆ ಹೋರಾಟ ಅನಿವಾರ್ಯ: ವೈ.ಎಸ್. ದೇವೂರ್

Update: 2020-01-26 17:35 GMT

ಬೆಂಗಳೂರು, ಜ.26: ಕಾನೂನನ್ನು ಸಮಪರ್ಕಕವಾಗಿ ಜಾರಿಗೆ ತರುಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಜೈ ಭೀಮ್ ದಳದ ಅಧ್ಯಕ್ಷ ವೈ.ಎಸ್. ದೇವೂರ್ ಹೇಳಿದರು.

ರವಿವಾರ ರಿಪಬ್ಲಿಕನ್ ಪಾರ್ಟಿ ಆ್ ಇಂಡಿಯಾ(ಎ) ಮತ್ತು ಸಮತಾ ಸೈನಿಕ ದಳ ಸದಾಶಿವನಗರದ ನಾಗಸೇನ ಬುದ್ಧವಿಹಾರ ಸಭಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ, ಸಾಂವಿಧಾನಿಕ ವೌಲ್ಯಗಳ ಪ್ರತಿಪಾದನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಂವಿಧಾನದಲ್ಲಿ ಸಮಾನತೆ ಬಗ್ಗೆ ತಿಳಿಸಲಾಗಿದೆ. ಆದರೆ ಇಂದಿಗೂ ಜನರು ಸರಿಯಾದ ಮನೆಗಳಿಲ್ಲದೆ ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಆಸ್ತಿ ಹಂಚಿಕೆಯಾಗುತ್ತಿಲ್ಲ. ಎಲ್ಲವೂ ಬಲಾಢ್ಯರ ಪಾಲಗುತ್ತಿದೆ. ಹೀಗಾಗಿ ಕಾನೂನುಗಳು ಸಮರ್ಪಕವಾಗಿ ಜಾರಿಗೆ ತರಲು ನಾವೆಲ್ಲರು ಒಟ್ಟಾಗಿ ಹೋರಾಡಬೇಕು ಎಂದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ದೇಶದ ಘನತೆ, ವ್ಯಕ್ತಿಗೌರವ ಸ್ಥಾಪಿಸಲು ಭತೃತ್ವ ನಿರ್ಮಾಣ ಮಾಡಿ ಇದರ ವೌಲ್ಯಗಳನ್ನು ಎತ್ತಿಹಿಡಿಯಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಿದ್ದಪಡಿಸಿ ಪ್ರಕಟಿಸಿದರು. ನಂತರ ಸಂವಿಧಾನ ರಚನೆ ಸಭೆಯಲ್ಲಿದ್ದ ಸದಸ್ಯರೆಲ್ಲರೂ ಇದಕ್ಕೆ ಸಹಿ ಹಾಕಿದ ಮೇಲೆ 1956ರಲ್ಲಿ ಸಂವಿಧಾನ ಜಾರಿ ಮಾಡುತ್ತಾರೆ. ಇದಾದ ಕೆಲವೇ ಕ್ಷಣದಲ್ಲಿ ಭಾರತ ಪ್ರಥಮ ರಾಷ್ಟ್ರಪತಿಯನ್ನಾಗಿ ಡಾ.ರಾಜೇಂದ್ರಪ್ರಸಾದ್ ಅವರನ್ನು ನೇಮಕ ಮಾಡಲಾಯಿತು. ಆಗ ಇದ್ದಂತ ಸಂವಿಧಾನ ಸಭೆಯು ಸಂಸತ್ ಆಯಿತು ಎಂದರು.

ಸ್ವಾತಂತ್ರ್ಯ ದೊರಕಿದ ದಿನದಿಂದ ಸಂವಿಧಾನ ಜಾರಿ ಆಗುವವರೆಗೆ ಅರೆ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದ್ದೆವು. ಯಾವಾಗ ಸಂವಿಧಾನ ಜಾರಿಯಾಯಿತೋ ಅಂದಿನಿಂದ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿತು. ಸಂವಿಧಾನದ ಪ್ರಸ್ತಾವನೆ ಓದಿದರೆ ಸಂವಿಧಾನದ ವೌಲ್ಯಗಳನ್ನು ಸುಲಭವಾಗಿ ಅರ್ಥೈಸಬಹುದು. ಇದರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ನೀಡಲಾಗಿದೆ. ಆದರೆ ಇಂದು ಇವುಗಳ ಬಗ್ಗೆ ಯಾರು ಮಾತನಾಡುತ್ತಿಲ್ಲ. ಕೇವಲ ಸಂವಿದಾನ ಪುಸ್ತಕಕ್ಕೆ ಸೀಮಿತವಾಗಿ ಬಿಟ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಬುದ್ದ ದಮ್ಮ ಸಂಘದ ಅಧ್ಯಕ್ಷ ಡಾ.ಎಚ್.ಆರ್.ಸುರೇಂದ್ರ, ದೇಶದ ಪ್ರಜೆಗಳಾದ ನಮಗೆ ಸಂವಿಧಾನದಲ್ಲಿ ಆರ್ಥಿಕ,ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ನೀಡಲಾಗಿದೆ. ಪ್ರತಿಯೊಬ್ಬರಿಗೂ ಸ್ಥಾನಮಾನ ಹಾಗೂ ಅವಕಾಶಗಳ ವಿಚಾರದಲ್ಲಿ ಸಮಾನತೆ ನೀಡಲಾಗಿದೆ. ಆದರೆ ಇದ್ಯಾವೂದು ಕೂಡ ಪಾಲನೆಯಾಗುತ್ತಿಲ್ಲ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊಕಿದರೆ ಮೀಸಲಾತಿ ನೀಡುವ ಅವಶ್ಯಕತೆ ಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ ಮಾಡಲಾಯಿತು. ದಲಿತ ಸಂರಕ್ಷ ಸಮಿತಿ ಅಧ್ಯಕ್ಷ ಲಯನ್ ಬಾಲಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News