ಮೂರನೇ ಟ್ವೆಂಟಿ-20: ಭಾರತ 179/5

Update: 2020-01-29 12:33 GMT

ಹ್ಯಾಮಿಲ್ಟನ್: ನ್ಯೂಝಿಲ್ಯಾಂಡ್ ವಿರುದ್ಧ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿದೆ.

 ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ರೋಹಿತ್ ಶರ್ಮಾ ಅರ್ಧಶತಕ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ರೋಹಿತ್ ಶರ್ಮಾ 65 ರನ್ (40ಎ, 6ಬೌ,3ಸಿ) ಗಳಿಸಿದರು.

ಲೋಕೇಶ್ ರಾಹುಲ್ 27 ರನ್, ಶಿವಮ್ ದುಬೆ 3ರನ್, ನಾಯಕ ವಿರಾಟ್ ಕೊಹ್ಲಿ 38 ರನ್, ಶ್ರೇಯಸ್ ಅಯ್ಯರ್ 17 ರನ್, ಮನೀಷ್ ಪಾಂಡೆ ಔಟಾಗದೆ 14ರನ್ ಮತ್ತು ರವೀಂದ್ರ ಜಡೇಜ ಔಟಾಗದೆ 10 ರನ್ ಗಳಿಸಿದರು.

ಟಿಮ್ ಸೌಥಿ 39ಕ್ಕೆ 2, ಮಿಚೆಲ್ ಸಾಂಟ್ನೆರ್ 37ಕ್ಕೆ 1 ಮತ್ತು ಕಾಲಿನ್ ಗ್ರ್ಯಾನ್ ಹೋಮ್ 13ಕ್ಕೆ 1 ವಿಕೆಟ್ ಪಡೆದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News