ಕೊರೋನವೈರಸ್: ಮೃತರ ಸಂಖ್ಯೆ 132ಕ್ಕೆ

Update: 2020-01-29 14:55 GMT

ಬೀಜಿಂಗ್ (ಚೀನಾ), ಜ. 29: ಚೀನಾದಲ್ಲಿ ಮಾರಕ ಕೊರೋನವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 132ಕ್ಕೇರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರ ಅಂತ್ಯದ ವೇಳೆಗೆ 31 ಪ್ರಾಂತಗಳಲ್ಲಿ ಕೊರೋನವೈರಸ್‌ ನಿಂದಾಗಿ ನ್ಯುಮೋನಿಯಕ್ಕೆ ಒಳಗಾದವರ ಒಟ್ಟು ಸಂಖ್ಯೆ 5,974ಕ್ಕೇರಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಬುಧವಾರ ಘೋಷಿಸಿದರು.

ಹುಬೈ ಪ್ರಾಂತವೊಂದರಲ್ಲೇ 3,554 ಖಚಿತಗೊಂಡ ಪ್ರಕರಣಗಳು ವರದಿಯಾಗಿವೆ. ವುಹಾನ್‌ ನ್ನು ಪ್ರಾಂತೀಯ ರಾಜಧಾನಿಯಾಗಿ ಹೊಂದಿರುವ ಹುಬೈ ಪ್ರಾಂತದಲ್ಲಿ 125 ಸಾವುಗಳು ಸಂಭವಿಸಿವೆ.

ಖಚಿತಗೊಂಡ ಪ್ರಕರಣಗಳ ಪೈಕಿ 1,239 ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕೃತ ಟಿವಿ ಸಿಜಿಟಿಎನ್ ವರದಿ ಮಾಡಿದೆ. ಅದೂ ಅಲ್ಲದೆ, ಚೀನಾ ಪ್ರಧಾನ ಭೂಭಾಗದಲ್ಲಿ 9,239 ಶಂಕಿತ ಪ್ರಕರಣಗಳಿವೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News