ಶಾಹೀನ್‌ಬಾಗ್: ಗನ್ ಝಳಪಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

Update: 2020-01-29 15:52 GMT

ಹೊಸದಿಲ್ಲಿ, ಜ.29: ಶಾಹೀನ್‌ಬಾಗ್‌ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದಲ್ಲಿಗೆ ಬಂದು ಪ್ರತಿಭಟನಾಕಾರರನ್ನು ಬಂದೂಕು ತೋರಿಸಿ ಬೆದರಿಸಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಸ್ಥಳೀಯ ನಿವಾಸಿ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಮುಹಮ್ಮದ್ ಲುಖ್ಮಾನ್ ಎಂದು ಗುರುತಿಸಲಾಗಿದ್ದು ಈತನ ವಿರುದ್ಧ ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಯಡಿ ಪ್ರಕರಣ ದಾಖಲಿಸಲಾಗಿದೆ.

ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಯುತ್ತಿದ್ದ ರಸ್ತೆಯಲ್ಲಿ ತನ್ನ ವಾಹನದ ಮೂಲಕ ಸಾಗುತ್ತಿದ್ದ ಈತ, ರಸ್ತೆಯ ಒಂದು ಭಾಗವನ್ನು ವಾಹನ ಸಂಚಾರಕ್ಕೆ ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರಲ್ಲಿ ಆಗ್ರಹಿಸಿದ್ದಾನೆ. ಆತನ ಬಳಿಯಿದ್ದ ಬಂದೂಕಿಗೆ ಲೈಸೆನ್ಸ್ ಇದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ(ಈಶಾನ್ಯ) ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.

ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಆತ ಗನ್ ತೋರಿಸಿ ಬೆದರಿಸಿದ. ಬಳಿಕ ಆತನನ್ನು ಹಿಡಿದು ಅಲ್ಲಿಂದ ದೂರ ಸಾಗಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News