ಮಹಿಳೆಯರು ಮಸೀದಿ ಪ್ರವೇಶಿಸಲು ಇಸ್ಲಾಂನಲ್ಲಿ ಅವಕಾಶವಿದೆ: ಸುಪ್ರೀಂಗೆ ತಿಳಿಸಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

Update: 2020-01-29 16:14 GMT

ಹೊಸದಿಲ್ಲಿ, ಜ.29: ಮಹಿಳೆಯರು ಮಸೀದಿ ಪ್ರವೇಶಕ್ಕೆ ಇಸ್ಲಾಂ ಧರ್ಮ ಯಾವತ್ತೂ ನಿಷೇಧ ವಿಧಿಸಿಲ್ಲ. ಈ ಸೂತ್ರವನ್ನು ವಿರೋಧಿಸುವ ಎಲ್ಲಾ ಫತ್ವಾಗಳನ್ನೂ ನಿರ್ಲಕ್ಷಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಿದೆ.

ಮುಸ್ಲಿಂ ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಮಸೀದಿ ಪ್ರವೇಶಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ಪುರುಷರಂತೆ, ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಮಹಿಳೆಯರಿಗೆ ಅನಿವಾರ್ಯವಲ್ಲ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಮಹಾರಾಷ್ಟ್ರ ಮೂಲದ ಮುಸ್ಲಿಂ ದಂಪತಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಮುಸ್ಲಿಂ ಕಾನೂನು ಮಂಡಳಿ ಅಫಿದಾವಿತ್ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News